Mysore
26
scattered clouds

Social Media

ಭಾನುವಾರ, 25 ಜನವರಿ 2026
Light
Dark

ಓದುಗರ ಪತ್ರ: ಹೊರ ರೋಗಿಗಳ ತಪಾಸಣಾ ಚೀಟಿ ಪಡೆಯಲು ಅನುಕೂಲ ಕಲ್ಪಿಸಿ

ಓದುಗರ ಪತ್ರ

ಹೆಚ್.ಡಿ. ಕೋಟೆ ಪಟ್ಟಣದಲ್ಲಿ ಸಾರ್ವಜನಿಕ ಆಸ್ಪತ್ರೆ ಹಾಗೂ ಮಕ್ಕಳ ಆಸ್ಪತ್ರೆ ಪ್ರತ್ಯೇಕವಾಗಿವೆ. ಆದರೆ ಎರಡೂ ಆಸ್ಪತ್ರೆಗಳಿಗೆ ಹೊರ ರೋಗಿಗಳ ಆರೋಗ್ಯ ತಪಾಸಣಾ ಚೀಟಿ ಪಡೆಯಲು ಒಂದೇ ಕೌಂಟರ್ ಇರುವುದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ.

ಮಕ್ಕಳ ಆಸ್ಪತ್ರೆಯಲ್ಲಿ ಮಕ್ಕಳು, ಗರ್ಭಿಣಿಯರು ಹಾಗೂ ಬಾಣಂತಿಯರು ಚಿಕಿತ್ಸೆ ಪಡೆಯಬೇಕಾದರೆ ಮಕ್ಕಳ ಆಸ್ಪತ್ರೆಯ ಎದುರಿನ ಸಾರ್ವಜನಿಕ ಆಸ್ಪತ್ರೆಗೆ ಬಂದು ತಪಾಸಣಾ ಚೀಟಿ ಪೆಯುವುದು ಅಗತ್ಯವಾಗಿದೆ. ಆದರೆ ಈ ಆಸ್ಪತ್ರೆಗೆ ಬರಲು ರಸ್ತೆಯನ್ನು ದಾಟಿ ಬರಬೇಕಾಗಿರುವುದರಿಂದ ಹಲವಾರು ಬಾರಿ ರಸ್ತೆ ಅಪಘಾತದಲ್ಲಿ ಸಾರ್ವಜನಿಕರು ಕೈಕಾಲು ಮುರಿದುಕೊಂಡಿರುವ ಘಟನೆಗಳು ನಡೆದಿವೆ. ಆದ್ದರಿಂದ ಶಾಸಕರು ಹಾಗೂ ಆಸ್ಪತ್ರೆ ಮುಖ್ಯಸ್ಥರು ಈ ಸಮಸ್ಯೆಯನ್ನು ಮನಗಂಡು ಎರಡೂ ಆಸ್ಪತ್ರೆಗಳಲ್ಲಿ ಪ್ರತ್ಯೇಕವಾಗಿ ತಪಾಸಣಾ ಚೀಟಿ ಪಡೆಯಲು ಅವಕಾಶ ಕಲ್ಪಿಸಬೇಕು.

ಆಸ್ಪತ್ರೆಯಲ್ಲಿ ಇರುವ ವ್ಹೀಲ್ ಚೇರ್‌ಗಳ ಚಕ್ರ ಮುರಿದು ಹಾಳಾಗಿದ್ದು, ಇದರಿಂದ ಮೂಳೆ ಮುರಿತಕ್ಕೊಳಗಾಗಿ ಆಸ್ಪತ್ರೆಗೆ ಬರುವ ರೋಗಿಗಳು ಹಾಗೂ ವಯೋವೃದ್ಧರನ್ನು ಕರೆದೊಯ್ಯಲು ತೊಂದರೆಯಾಗಿದೆ. ಸಂಬಂಧಪಟ್ಟವರು ಕೂಡಲೇ ರೋಗಿಗಳಿಗೆ ಹೊಸ ವ್ಹೀಲ್‌ಚೇರ್ ವ್ಯವಸ್ಥೆ ಮಾಡಬೇಕಾಗಿದೆ.

– ಸಿದ್ದಲಿಂಗೇಗೌಡ, ಹೈರಿಗೆ ಗ್ರಾಮ, ಎಚ್.ಡಿ.ಕೋಟೆ ತಾ.

Tags:
error: Content is protected !!