ಮೈಸೂರಿನ ಕುವೆಂಪು ನಗರ ‘ಕೆ ’ ಬ್ಲಾಕ್‌ನಲ್ಲಿ ಬೀದಿ ನಾಯಿಗಳ ಹಾವಳಿ ಮಿತಿ ಮೀರಿದೆ. ವೃದ್ಧರು, ಮಕ್ಕಳ ಮೇಲೆ ದಾಳಿ ಮಾಡುತ್ತಿದ್ದು, ಮನೆಯಿಂದ ಹೊರಬರಲು ಹೆದರುವಂತಾಗಿದೆ. ಕೋಳಿ, ಬೆಕ್ಕುಗಳಿಗಂತೂ ಇವುಗಳ ದಾಳಿಯಿಂದ ಉಳಿಗಾಲ ವಿಲ್ಲದಂತಾಗಿದೆ.
ಮಧ್ಯೆ ರಾತ್ರಿ ನಾಯಿಗಳ ನಡುವೆ ಜಗಳ ನಡೆದರಂತೂ ಜನಗಳು ನಿದ್ರೆ ಮಾಡಲು ಸಾಧ್ಯವಾಗುತ್ತಿಲ್ಲ. ಸಂಬಂಧಪಟ್ಟವರು ಕೂಡಲೇ ಬೀದಿ ನಾಯಿಗಳ ಹಾವಳಿ ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕಾಗಿದೆ.
-ಕೆ.ರಘುರಾಮ್ ವಾಜಪೇಯಿ, ಮೈಸೂರು





