Mysore
29
scattered clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಓದುಗರ ಪತ್ರ: ಜ್ವಲಂತ ಸಮಸ್ಯೆಗಳ ಕುರಿತು ಚರ್ಚೆಗಳಾಗಲಿ

ರಾಜ್ಯ ವಿಧಾನಮಂಡಲದ ಚಳಿಗಾಲದ ಅಧಿವೇಶನ ಡಿಸೆಂಬರ್ ೯ರಿಂದ ನಡೆಯುತ್ತಿದ್ದು, ೧೦ ದಿನಗಳ ಕಾಲ ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯಲಿದೆ. ಈ ಅಧಿವೇಶನದಲ್ಲಿ ರಾಜ್ಯದ ಜ್ವಲಂತ ಸಮಸ್ಯೆಗಳ ಕುರಿತು ಚರ್ಚೆಗಳಾಗಬೇಕಿದೆ. ಇತ್ತೀಚಿನ ವರ್ಷಗಳಲ್ಲಿ ಅಧಿವೇಶನ ಎಂದರೆ ಅಲ್ಲಿ ಕೇವಲ ಗದ್ದಲ-ಗಲಾಟೆ ಎನ್ನುವಂತಾಗಿದೆ.

ವೈಯಕ್ತಿಕ ದ್ವೇಷದಿಂದಾಗಿ ಒಬ್ಬರ ಮೇಲೊಬ್ಬರು ಆರೋಪ-ಪ್ರತ್ಯಾರೋಪಗಳನ್ನು ಮಾಡಿಕೊಂಡು ಅಧಿವೇಶನದಿಂದ ಬಹಿಷ್ಕಾರಗೊಳ್ಳುತ್ತಿದ್ದಾರೆ. ಎಷ್ಟೋ ಬಾರಿ ಶಾಸಕರು ಕೈ ಕೈ ಮಿಲಾಯಿಸುವ ಹಂತಕ್ಕೂ ತಲುಪಿರುವ ಉದಾಹರಣೆಗಳಿವೆ. ಬೆಳಗಾವಿ ಯಲ್ಲಿ ನಡೆಯುತ್ತಿರುವ ಅಧಿವೇಶನವನ್ನು ಜನರು ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ವೀಕ್ಷಿಸುತ್ತಿರುತ್ತಾರೆ. ನಾವು ಆರಿಸಿ ಕಳುಹಿಸಿರುವ ನಮ್ಮ ಶಾಸಕರು ನಮ್ಮ ಭಾಗದ ಸಮಸ್ಯೆಗಳನ್ನು ಪ್ರಸ್ತಾಪಿಸಿ ಪರಿಹಾರಕ್ಕಾಗಿ ಆಗ್ರಹಿಸುತ್ತಾರೆ ಎಂಬ ನಂಬಿಕೆಯಲ್ಲಿರುತ್ತಾರೆ.

ಆದರೆ ಅಧಿವೇಶನದಲ್ಲಿ ಶಾಸಕರ ವರ್ತನೆ ಅವರ ನಂಬಿಕೆಯನ್ನು ಹುಸಿಯಾಗಿಸುತ್ತಿದ್ದು, ಇದು ಅಧಿವೇಶನವೋ ಇಲ್ಲ ಮಾರುಕಟ್ಟೆಯೋ ಎಂದುಕೊಳ್ಳು ವಂತಾಗಿದೆ. ಆದ್ದರಿಂದ ಈ ಬಾರಿಯಾದರೂ ರಾಜ್ಯದ ಜ್ವಲಂತ ಸಮಸ್ಯೆಗಳ ಕುರಿತು ಚರ್ಚೆಗಳಾಗಿ, ಅವುಗಳಿಗೆ ಪರಿಹಾರವನ್ನು ಕಂಡುಕೊಳ್ಳಬೇಕಿದೆ. ಬೆಳಗಾವಿಯಲ್ಲಿ ವರ್ಷಕ್ಕೊಮ್ಮೆ ಅಧಿವೇಶನ ನಡೆಸುವುದೇ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಕುರಿತು ಚರ್ಚಿಸುವುದಕ್ಕಾಗಿ, ಚರ್ಚಿಸಿ ಆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದಕ್ಕಾಗಿ. ಹಾಗಾದಾಗ ಮಾತ್ರ ಬೆಳಗಾವಿಯ ಅಧಿವೇಶನಕ್ಕೂ ಒಂದು ಅರ್ಥ ಬರುವುದು. ಆದ್ದರಿಂದ ಆಡಳಿತಾರೂಢ ಪಕ್ಷ ಮತ್ತು ವಿಪಕ್ಷಗಳು ತಂತ್ರ ಕಾರ್ಯತಂತ್ರಗಳನ್ನು ರೂಪಿಸಿಕೊಂಡು ಪರಸ್ಪರ ಕಾಲು ಎಳೆದುಕೊಳ್ಳುವ ಬದಲು ಸಮಸ್ಯೆಗಳ ಕುರಿತು ಚರ್ಚಿಸಿ ಪರಿಹಾರ ಕಂಡುಕೊಳ್ಳಲಿ.

-ಎನ್. ಪಿ. ಪರಶಿವಮೂರ್ತಿ, ನಂಜೀಪುರ, ಸರಗೂರು ತಾ

Tags: