ಚಾಮರಾಜನಗರ ಜಿಲ್ಲೆಯ ಹೊಂಗನೂರು ಗ್ರಾಮದಲ್ಲಿ ವಾಟರ್ ಮ್ಯಾನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಚಿಕ್ಕೂಸನಾಯಕ ಅವರು ಸಕಾಲಕ್ಕೆ ಸಂಬಳ ಸಿಗದೇ ಆತ್ಮಹತ್ಯೆ ಮಾಡಿಕೊಂಡಿದ್ದು, ಬೇಸರದ ಸಂಗತಿಯಾಗಿದೆ.
ಕಳೆದ ೨೭ ತಿಂಗಳುಗಳಿಂದ ಸಂಬಳವಿಲ್ಲದೇ ಸಂಕಷ್ಟಕ್ಕೊಳಗಾಗಿದ್ದರು ಎನ್ನಲಾಗಿದ್ದು, ಅವರ ಕುಟುಂಬದವರು ಮುಂದಿನ ದಾರಿ ಕಾಣದೇ ಕಂಗಾಲಾಗಿದ್ದಾರೆ. ಉದ್ಯೋಗಿಗಳಿಗೆ ಸಂಬಳ ಒಂದೆರಡು ದಿನ ತಡವಾದರೂ ಚಡಪಡಿಸುವಂತಾಗುತ್ತದೆ. ಆದರೆ ೨೭ ತಿಂಗಳುಗಳಿಂದ ವೇತನ ಇಲ್ಲದೆ ಸಂಸಾರ ನಡೆಸಲು ಎಂತಹ ವಿಷಮ ಪರಿಸ್ಥಿತಿ ಅವರಿಗೆ ಎದುರಾಗಿರಬಹುದು ಎಂಬುದನ್ನು ಊಹಿಸಿಕೊಳ್ಳ ಬಹುದಾಗಿದೆ. ಸಂಬಂಧಪಟ್ಟವರು ಇನ್ನು ಮುಂದಾದರೂ ಗ್ರಾಮ ಪಂಚಾಯಿತಿ ಮಟ್ಟದ ಸರ್ಕಾರಿ ನೌಕರರಿಗೆ ಸಕಾಲಕ್ಕೆ ವೇತನ ಪಾವತಿಸುವ ಮೂಲಕ ಇಂತಹ ಅನಾಹುತಗಳಾಗದಂತೆ ಕ್ರಮ ಕೈಗೊಳ್ಳಬೇಕಾಗಿದೆ.
-ವಿಜಯ್ ಹೆಮ್ಮಿಗೆ , ಮೈಸೂರು





