Mysore
22
clear sky

Social Media

ಬುಧವಾರ, 21 ಜನವರಿ 2026
Light
Dark

ಓದುಗರ ಪತ್ರ:  ಮಹಾಪುರುಷರೊಂದಿಗೆ ಹೋಲಿಕೆ ಸಲ್ಲದು

ಓದುಗರ ಪತ್ರ

ಸಮಾಜ ಸುಧಾರಣೆಗಾಗಿ ಶ್ರಮಿಸಿದ ಭಕ್ತ ಕನಕದಾಸರು, ಡಾ. ಬಿ.ಆರ್. ಅಂಬೇಡ್ಕರ್, ಮಹಾತ್ಮ ಗಾಂಧಿ, ಲಾಲ್ ಬಹದ್ದೂರ್ ಶಾಸ್ತ್ರಿ ಮೊದಲಾದ ಮಹಾಪುರುಷರ ಜನ್ಮ ದಿನಾಚರಣೆ ಸಂದರ್ಭದಲ್ಲಿ ಉಪಸ್ಥಿತರಿರುವ ರಾಜಕಾರಣಿಗಳು, ಉದ್ಯಮಿಗಳನ್ನು ‘ಇವರು ಮಹಾ ಪುರುಷರಂತೆಯೇ’ ಎಂದು ಹೋಲಿಸಿ ಹಾಡಿ ಹೊಗಳುವುದನ್ನು ಕೆಲವರು ರೂಢಿಸಿಕೊಂಡಿದ್ದಾರೆ. ಇದು ಸಲ್ಲದ್ದು.

ಸ್ವಂತಕ್ಕಾಗಿ ಏನನ್ನೂ ಇಟ್ಟುಕೊಳ್ಳದೆ ಸಮಾಜಕ್ಕಾಗಿ ಸರ್ವಸ್ವವನ್ನೂ ಸಮರ್ಪಿಸಿದ ಮಹಾಪುರುಷರನ್ನು ಅಧಿಕಾರ ಹಾಗೂ ಆಸ್ತಿ ಗಳಿಕೆಗೆ ಸೀಮಿತರಾಗಿರುವ ರಾಜಕಾರಣಿಗಳು, ಉದ್ಯಮಿಗಳಿಗೆ ಹೋಲಿಸುವುದು ಸರಿಯಲ್ಲ. ಮಹಾಪುರುಷರ ಜೀವನ ಮತ್ತು ಸಾಧನೆ ಸಮಾಜಕ್ಕೆ ಮಾರ್ಗದರ್ಶಕವಾಗಿರುತ್ತದೆ. ಆದರೆ ಸ್ವಂತಕ್ಕಾಗಿಯೇ ಸದಾಕಾಲ ಚಿಂತಿಸುವ ರಾಜಕಾರಣಿಗಳು ಹಾಗೂ ಉದ್ಯಮಿಗಳಿಗೂ ಮಹಾ ಪುರುಷರ ಚಿಂತನೆಗಳಿಗೂ ಅಜಗಜಾಂತರ ವ್ಯತ್ಯಾಸವಿರುತ್ತದೆ.

ಮಹಾಪುರುಷರಿಗೆ ಮಹಾಪುರುಷರೇ ಸಾಟಿಯೇ ಹೊರತು ಬೇರಾರೂ ಅವರಿಗೆ ಸರಿಸಮಾನರಲ್ಲ. ಇನ್ನು ಮುಂದಾದರೂ ಸಭೆ, ಸಮಾರಂಭಗಳಲ್ಲಿ ರಾಜಕಾರಣಿಗಳನ್ನು ಮಹಾಪುರುಷರಿಗೆ ಹೋಲಿಕೆ ಮಾಡಿ ಹಾಡಿ ಹೊಗಳುವುದನ್ನು ನಿಲ್ಲಿಸಬೇಕು.

-ಎ.ಜಿ.ಚಂದ್ರಲಾ, ಪ್ರಥಮ ಬಿ.ಎ., ಮಹಾರಾಜ ಕಾಲೇಜು, ಮೈಸೂರು

Tags:
error: Content is protected !!