Mysore
18
overcast clouds

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ಓದುಗರ ಪತ್ರ:  ಆನ್‌ಲೈನ್ ಅಶ್ಲೀಲತೆ ನಿಯಂತ್ರಣಕೆ ರಾಷ್ಟ್ರೀಯ ನೀತಿ ಅಗತ್ಯ

ಓದುಗರ ಪತ್ರ

ಇತ್ತೀಚೆಗೆ ಅಶ್ಲೀಲ ವೆಬ್‌ಸೈಟ್‌ಗಳ ಮೇಲೆ ನಿಷೇಧ ಹೇರಬೇಕೆಂಬ ಮನವಿಯ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಅಭಿಪ್ರಾಯವು, ಆನ್‌ಲೈನ್ ಅಶ್ಲೀಲತೆ ನಿಯಂತ್ರಣದ ಅಗತ್ಯವನ್ನು ಮತ್ತೊಮ್ಮೆ ಬೆಳಕಿಗೆ ತಂದಿದೆ. ಅಪ್ರಾಪ್ತರು ಇದಕ್ಕೆ ಒಳಗಾಗುವ ಅಪಾಯ ಅತ್ಯಂತ ಗಂಭೀರ ವಿಷಯವಾಗಿದ್ದು, ಅದನ್ನು ನಿರ್ಲಕ್ಷಿಸಲಾಗದು. ಕೇಂದ್ರ ಸರ್ಕಾರವು ಡಿಜಿಟಲ್ ಸುರಕ್ಷತೆ ಮತ್ತು ಜಾಗೃತಿ ನೀತಿ ರೂಪಿಸಬೇಕಾಗಿದ್ದು, ಅದರಲ್ಲಿ ತಾಂತ್ರಿಕ ನಿಯಂತ್ರಣ, ಡಿಜಿಟಲ್ ಸಾಕ್ಷರತೆ ಮತ್ತು ಪೋಷಕರ ಸಬಲಿಕರಣ ಮುಖ್ಯ ಅಂಶಗಳಾಗಿರಬೇಕು.

ಅಪ್ರಾಪ್ತರು ಬಳಸುವ ಡಿಜಿಟಲ್ ಸಾಧನಗಳಲ್ಲಿ ಕಡ್ಡಾಯವಾಗಿ ವಿಷಯ ಶೋಧಕ ವ್ಯವಸ್ಥೆ ಇರಬೇಕು. ಜೊತೆಗೆ, ವಯಸ್ಸು ದೃಢೀಕರಿಸುವ ಕೃತಕ ಬುದ್ಧಿಮತ್ತೆ ಆಧಾರಿತ ವ್ಯವಸ್ಥೆ ಹಾಗೂ ಇಂಟರ್ನೆಟ್ ಸೇವಾದಾತರ ಸಹಯೋಗದ ಮೂಲಕ ಅಶ್ಲೀಲ ವಿಷಯಗಳ ಪ್ರವೇಶವನ್ನು ತಡೆಹಿಡಿಯ ಬೇಕು. ಅದರ ಜೊತೆಗೆ, ಶಾಲಾ ಪಠ್ಯಕ್ರಮದಲ್ಲೇ ಡಿಜಿಟಲ್ ಶಿಕ್ಷಣವನ್ನು ಅಳವಡಿಸಿ ಮಕ್ಕಳಲ್ಲಿ ಆರೋಗ್ಯಕರ ಮಾಹಿತಿ ಮತ್ತು ಹಾನಿಕಾರಕ ವಿಷಯಗಳ ನಡುವಿನ ವ್ಯತ್ಯಾಸಗಳ ಕುರಿತು ಅರಿವು ಮೂಡಿಸುವುದು ಅವಶ್ಯ.

 – ಡಾ.ಎಚ್.ಕೆ. ವಿಜಯಕುಮಾರ್, ಬೆಂಗಳೂರು

Tags:
error: Content is protected !!