ಚನ್ನರಾಯಪಟ್ಟಣ ತಾಲ್ಲೂಕಿನ ನುಗ್ಗೇಹಳ್ಳಿ ಹೋಬಳಿಯ ಸಂತೇಶಿವರ ಏತ ನೀರಾವರಿ ಯೋಜನೆಯ ರೂವಾರಿಯಾದ, ಸಾಹಿತಿ ದಿ.ಎಸ್.ಎಲ್. ಭೈರಪ್ಪ ಅವರ ಹೆಸರನ್ನು ಯೋಜನೆಗೆ ಇಡುವಂತೆ ಕಾವೇರಿ ನೀರಾವರಿ ನಿಗಮಕ್ಕೆ ಮನವಿ ಮಾಡಿರುವ ಶಾಸಕ ಸಿ.ಎನ್. ಬಾಲಕೃಷ್ಣ ಅವರ ನಡೆ ಶ್ಲಾಘನೀಯ.
ಭೈರಪ್ಪರವರು ಹುಟ್ಟೂರಿಗೆ ಏನಾದರೂ ಮಾಡಬೇಕೆಂಬ ಇಚ್ಛೆಯಿಂದ, ರೈತರಿಗೆ ಶಾಶ್ವತವಾದ ನೀರಾವರಿ ಯೋಜನೆ ರೂಪಿಸಲು ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ೨೫ ಕೋಟಿ ರೂ. ಅನುದಾನ ಬಿಡುಗಡೆ ಮಾಡಿಸುವ ಮೂಲಕ ಅನುದಾನ ತಂದಿದ್ದರಿಂದ, ಇಂದು ಸಂತೇಶಿವರ ಗ್ರಾಮದ ದೊಡ್ಡಕೆರೆ ಹಾಗೂ ಬೆಳಗುಲಿ ಗ್ರಾಮದ ಕೆರೆ ತುಂಬಿತುಳುಕಿದ್ದು,
ಭೈರಪ್ಪನವರ ಕನಸು ನನಸಾಗಿದೆ. ಸಂತೇಶಿವರದಲ್ಲಿ ಭೈರಪ್ಪ ಅವರ ಹೆಸರಿನಲ್ಲಿ ಸಂಸ್ಕೃತಿ ಭವನ ನಿರ್ಮಾಣ ಮಾಡಲು ಸಿಎಂ ಸಿದ್ದರಾಮಯ್ಯ ಅವರು ೫ ಕೋಟಿ ರೂ. ಅನುದಾನ ಘೋಷಿಸಿದ್ದು, ಆದಷ್ಟು ಬೇಗ ಬಿಡುಗಡೆ ಮಾಡುವುದು ಅಗತ್ಯ.
– ಬೆಸಗರಹಳ್ಳಿ ರವಿ ಪ್ರಸಾದ್, ಮೈಸೂರು





