Mysore
14
broken clouds

Social Media

ಗುರುವಾರ, 22 ಜನವರಿ 2026
Light
Dark

ಓದುಗರ ಪತ್ರ: ಜೀವನವನ್ನು ಸಾರ್ಥಕಗೊಳಿಸಿ

ಓದುಗರ ಪತ್ರ

ಮಾನವ ಜನ್ಮ ಪ್ರಕೃತಿಯು ಕೊಟ್ಟ ಅಮೂಲ್ಯವಾದ ಕೊಡುಗೆ. ಸಮಸ್ಯೆಗಳಿವೆ ಎಂದು ಜೀವನವನ್ನು ಅಂತ್ಯಗೊಳಿಸಲು ಯೋಚನೆ ಮಾಡುವುದು ತಪ್ಪು. ತಾವು ಬಯಸಿದ ವಸ್ತು ಕ್ಷಣಮಾತ್ರದಲ್ಲಿ ಸಿಗಬೇಕು ಎಂದು ಬಯಸುವ ಮನುಷ್ಯ ತಾನು ಅಂದು ಕೊಂಡಿದ್ದನ್ನು ಸಾಧಿಸಲಾಗದಿದ್ದರೆ ಆತ್ಮತ್ಯೆ ಹಾದಿ ಹಿಡಿಯುತ್ತಾನೆ. ಆತ್ಮಹತ್ಯೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಸ್ನೇಹಿತರು, ಶಾಲಾ ಕಾಲೇಜುಗಳ ಪಾತ್ರ ಹಿರಿದಾಗಿರುತ್ತದೆ. ಈಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕಾಗುತ್ತದೆ.

ಉದ್ಯೋಗ ಸಿಗದಿದ್ದಾಗ, ವಿದ್ಯಾಭ್ಯಾಸದಲ್ಲಿ, ಪ್ರೇಮದಲ್ಲಿ ವಿಫಲವಾದಾಗ, ಅನಾರೋಗ್ಯ, ದುಶ್ಚಟಕ್ಕೆ ಬಲಿಯಾದಾಗ ಹೀಗೆ ಹಲವಾರು ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರವನ್ನು ಮಾಡುತ್ತಾರೆ. ಶಾಲಾ-ಕಾಲೇಜುಗಳಲ್ಲಿ ಮನೋವೈದ್ಯರು ಮಕ್ಕಳಿಗೆ ಧೈರ್ಯ ತುಂಬಬೇಕು. ಶಿಕ್ಷಕರು ಇದರ ವಿಷಯವಾಗಿ ತಿಳಿ ಹೇಳಬೇಕು. ಮುದ್ರಣ ಹಾಗೂ ದೃಶ್ಯ ಮಾಧ್ಯಮಗಳಲ್ಲಿ ಆತ್ಮಹತ್ಯೆಯ ಸುದ್ದಿಗಳನ್ನು ವೈಭವೀಕರಿಸಬಾರದು. ಬದುಕನ್ನು ಬಂದಂತೆ ಸ್ವೀಕರಿಸಬೇಕು. ಈ ಕುರಿತು ಸರ್ಕಾರಗಳು ಜಾಗೃತಿ ಮೂಡಿಸಲಿ.

 -ಎಂ. ಎಸ್. ಉಷಾ ಪ್ರಕಾಶ್, ಎಸ್. ಬಿ.ಎಂ. ಕಾಲೋನಿ, ಮೈಸೂರು

Tags:
error: Content is protected !!