ಎನ್‌ಐಒಎಸ್ (ರಾಷ್ಟ್ರೀಯ ಮುಕ್ತ ಶಾಲಾ ಶಿಕ್ಷಣ ಸಂಸ್ಥೆ) ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನ್ಯಾಯವನ್ನು ಶಿಕ್ಷಣ ಇಲಾಖೆ ಗಮನಿಸಬೇಕಾದ ಅಗತ್ಯ ಇದೆ. ರಾಷ್ಟ್ರ ಮಟ್ಟದ ಮಾನ್ಯತೆ ಪಡೆದಿದ್ದರೂ ಈ ಮಂಡಳಿಯ ವಿದ್ಯಾರ್ಥಿಗಳಿಗೆ ಅನೇಕ ಕಾಲೇಜುಗಳು ಇನ್ನೂ ಪ್ರವೇಶ ನಿರಾಕರಿಸುತ್ತಿವೆ ಎಂಬ ವರದಿಗಳು ಬರುತ್ತಿವೆ. ಎಐಸಿಟಿಇ, ಯುಜಿಸಿ ಮತ್ತು ಶಿಕ್ಷಣ ಸಚಿವಾಲಯವು ಎನ್‌ಐಒಎಸ್ ಮಾನ್ಯತೆಯನ್ನು ಸ್ಪಷ್ಟವಾಗಿ ನೀಡಿರುವಾಗಲೂ, ಕೆಲವು ಸಂಸ್ಥೆಗಳು ಮಾನ್ಯವಲ್ಲ ಎಂಬ ನೆಪದಲ್ಲಿ ವಿದ್ಯಾರ್ಥಿಗಳ ಭವಿಷ್ಯವನ್ನು ನಾಶಪಡಿಸುತ್ತಿವೆ.
ಇದು ಕೇವಲ ಅಜ್ಞಾನವಲ್ಲ , ಅಸಮಾನತೆ ಮತ್ತು ಅಸಂವೇದನಾ ಶೀಲತೆಯ ನಿದರ್ಶನ.ಎನ್‌ಐಒಎಸ್ ವಿದ್ಯಾರ್ಥಿಗಳು ಕೇವಲ ತಮ್ಮ ಪರಿಶ್ರಮ ಮತ್ತು ಅರ್ಹತೆಗೆ ತಕ್ಕ ಗೌರವವನ್ನು ಮಾತ್ರ ಕೋರುತ್ತಿದ್ದಾರೆ. ಆದರೆ ಸಮಾಜವು ಅವರನ್ನು ಡ್ರಾಪ್‌ಔಟ್ ಎಂದು ಕಳಂಕಿಸುವ ಮೂಲಕ ಅವರ ಆತ್ಮವಿಶ್ವಾಸವನ್ನು ನಾಶಮಾಡುತ್ತಿದೆ. ಸರ್ಕಾರ ಮತ್ತು ಶಿಕ್ಷಣ ಸಂಸ್ಥೆಗಳು ತಕ್ಷಣವೇ ಕ್ರಮ ಕೈಗೊಂಡು, ಎಲ್ಲ ಕಾಲೇಜುಗಳ ಪ್ರವೇಶ ಪೋರ್ಟಲ್‌ಗಳಲ್ಲಿ ಎನ್‌ಐಒಎಸ್ ಮಂಡಳಿಯನ್ನು ಕಡ್ಡಾಯವಾಗಿ ಸೇರಿಸಬೇಕು. ಜೊತೆಗೆ ಅಽಕಾರಿಗಳಿಗೆ ಸುತ್ತೋಲೆ ಹೊರಡಿಸಬೇಕು.
– ಡಾ.ಎಚ್.ಕೆ. ವಿಜಯಕುಮಾರ್, ಬೆಂಗಳೂರು





