ನಂದಿನಿ ‘ಸಮೃದ್ಧಿ’ ಹಾಲನ್ನು ಒಂದು ತಿಂಗಳು ಪ್ರಮೋಷನ್‌ಗಾಗಿ ಅರ್ಧ ಲೀ.ಗೆ ೨೫ ರೂ.ನಂತೆ ಸರಬರಾಜು ಮಾಡುತ್ತಿದ್ದರು. ಹಾಲು ಗಟ್ಟಿಯಾಗಿತ್ತು. ಒಳ್ಳೆ ಕೆನೆಗಟ್ಟುತ್ತಿತ್ತು. ಬೆಣ್ಣೆಯೂ ಚೆನ್ನಾಗಿ ಬರುತ್ತಿತ್ತು. ಇದೀಗ ಕಳೆದ ಒಂದು ವಾರದಿಂದ ೩ ರೂ. ದರ ಹೆಚ್ಚಿಸಿ ಅರ್ಧ ಲೀ.ಗೆ ೨೭ ರೂ. ನಿಗದಿಪಡಿಸಿದ್ದಾರೆ. ದರವೇನೊ ಹೆಚ್ಚಿಸಿದರು. ಆದರೆ ಗುಣಮಟ್ಟ ಉಳಿಸಿಕೊಳ್ಳಲಿಲ್ಲ.
ಈಗ ದರ ಹೆಚ್ಚು ತೆತ್ತರೂ ಹಾಲು ಮೊದಲಿನಂತೆ ಕೆನೆಗಟ್ಟುವುದೂ ಇಲ್ಲ. ಬೆಣ್ಣೆಯೂ ಬರುವುದಿಲ್ಲ. ಸ್ಪೆಷಲ್ ಹಾಲನ್ನು ಸಮೃದ್ಧಿ ಪ್ಯಾಕೆಟ್‌ನಲ್ಲಿ ಸರಬರಾಜು ಮಾಡಿ ಗ್ರಾಹಕರನ್ನು ಡೇರಿ ವಂಚಿಸುತ್ತಿರುವಂತಿದೆ. ಇದು ಖಂಡನೀಯ. ತಕ್ಷಣ ಡೇರಿ ಮೊದಲಿನ ಗುಣಮಟ್ಟದಲ್ಲಿ ಸಮೃದ್ಧಿ ಹಾಲು ಪೂರೈಸಲಿ.
-ಹರೀಶ ಬಂದಗದ್ದೆ, ಪತ್ರಕರ್ತ, ಮೈಸೂರು





