ಮೈಸೂರಿನ ಪ್ರಮುಖ ವೃತ್ತಗಳಿಗೆ ಹಾಗೂ ರಸ್ತೆಗಳಿಗೆ ಹಲವು ಮಹನೀಯರ ಹೆಸರನ್ನು ನಾಮಕರಣ ಮಾಡಲಾಗಿದೆ. ವೃತ್ತ ಅಥವಾ ರಸ್ತೆಯಲ್ಲಿ ಮಹನೀಯರ ಬಗ್ಗೆ ಕಿರುಪರಿಚಯ ಹಾಗೂ ಅವರ ಭಾವಚಿತ್ರವನ್ನು ಅಳವಡಿಸಬೇಕಾಗಿದೆ. ಇದರಿಂದ ಪ್ರತಿಯೊಬ್ಬರಿಗೂ ಮಹಾನೀಯರ ಬಗ್ಗೆ ತಿಳಿಯಲು ಅನುಕೂಲವಾಗುತ್ತದೆ. ಜಿಲ್ಲಾಡಳಿತದಿಂದ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.
-ಮಂಜೇಶ್ ದೇವಗಳ್ಳಿ , ಮೈಸೂರು


