ಮಕ್ಕಳಿಲ್ಲ ಎಂಬ ಚಿಂತೆಯನ್ನು ಬದಿಗೊತ್ತಿ ಗಿಡ ಮರಗಳನ್ನು ತನ್ನ ಮಕ್ಕಳೆಂದು ಪ್ರೀತಿಸಿ, ಬೆಳೆಸುವುದರ ಮೂಲಕ ಸಾಲು ಮರದ ತಿಮ್ಮಕ್ಕ ರಾಷ್ಟ್ರಮಟ್ಟದಲ್ಲಿ ಖ್ಯಾತಿ ಗಳಿಸಿದ್ದರು. ಇವರ ಸೇವೆಯನ್ನು ಪರಿಗಣಿಸಿ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಅನೇಕ ಪ್ರಶಸ್ತಿಗಳಿಗೆ ತಿಮ್ಮಕ್ಕ ಭಾಜನರಾಗಿದ್ದಾರೆ. ಈಗ ಅವರು ನಮ್ಮನ್ನಗಲಿದ್ದು, ಸಾಲುಮರದ ತಿಮ್ಮಕ್ಕ ಅವರ ಸೇವೆಯನ್ನು ಸ್ಮರಿಸಿ ಮುಂದಿನ ಪೀಳಿಗೆಗೆ ಸಾಲು ಮರದ ತಿಮ್ಮಕ್ಕ ಅವರು ಪರಿಸರ ಸಂರಕ್ಷಣೆಗಾಗಿ ಸಲ್ಲಿಸಿರುವ ಸೇವೆಯನ್ನು ತಿಳಿಸಲು ಇವರ ಸ್ಮಾರಕ ನಿರ್ಮಾಣ ಮಾಡಲು ರಾಜ್ಯ ಸರ್ಕಾರವು ಮುಂದಾಗಬೇಕು.
-ನಾಗೇಶ್, ಮಾನಸಗಂಗೋತ್ರಿ, ಮೈಸೂರು





