ರಾಜ್ಯದಲ್ಲಿ ೨೫,೦೦೦ ನವೋದ್ಯಮಗಳನ್ನು ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚೆಗೆ ಹೇಳಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ ಐಟಿ, ಬಿಟಿ ಸೇರಿದಂತೆ ಎಲ್ಲ ಉದ್ಯಮಗಳನ್ನೂ ಬೆಂಗಳೂರಿನಲ್ಲೇ ಸ್ಥಾಪಿಸುತ್ತಿರುವುದರಿಂದ ಅಲ್ಲಿಗೆ ಉದ್ಯೋಗ ಅರಸಿ ಬರುವವರ ಸಂಖ್ಯೆಯೂ ಹೆಚ್ಚಾಗಿದೆ.
ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಇತರೆ ಮಹಾನಗರಗಳಾದ ಮೈಸೂರು, ಮಂಗಳೂರು, ಹುಬ್ಬಳ್ಳಿ, ಧಾರವಾಡ ಮುಂತಾದ ನಗರಗಳ ಅಭಿವೃದ್ಧಿಯತ್ತಲೂ ರಾಜ್ಯ ಸರ್ಕಾರ ಗಮನ ಹರಿಸಬೇಕಾಗಿದೆ. ಈಗ ಮೈಸೂರು ಮಹಾನಗರವನ್ನು ಗ್ರೇಟರ್ ಮೈಸೂರು ಆಗಿ ಪರಿವರ್ತಿಸುವ ಯತ್ನ ನಡೆದಿದೆ. ಅದೇ ರೀತಿ ಈಗ ಸ್ಥಾಪಿಸಲು ಹೊರಟಿರುವ ೨೫,೦೦೦ ನವ ಉದ್ಯಮಗಳನ್ನು ಕೇವಲ ಬೆಂಗಳೂರಿನಲ್ಲಿ ಮಾತ್ರವಲ್ಲದೆ ಇಡೀ ರಾಜ್ಯದ ಉದ್ದಗಲಕ್ಕೂ ವಿಸ್ತರಿಸಲು ರಾಜ್ಯ ಸರ್ಕಾರ ತುರ್ತು ಗಮನ ಹರಿಸಬೇಕಾಗಿದೆ.
-ಕೆ.ವಿ.ವಾಸು, ವಿವೇಕಾನಂದ ನಗರ, ಮೈಸೂರು





