Mysore
20
overcast clouds
Light
Dark

ಎಲ್ಲ ಕ್ರೀಡೆಗಳಿಗೂ ಮಾನ್ಯತೆ ಸಿಗಲಿ

ಭಾರತೀಯ ಕ್ರಿಕೆಟ್ ತಂಡ 20240 83-20 ವಿಶಕಪ್ ಮುಡಿಗೇರಿಸಿಕೊಂಡು, ಚಾಂಪಿಯನ್ ಆಗಿ ಹೊರಹೊಮ್ಮಿರುವುದು ದೇಶವೇ ಹೆಮ್ಮೆಪಡುವ ವಿಷಯ.

ವಿಜೇತ ತಂಡದೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಂವಾದ ನಡೆಸಿದ್ದು, ಅಭಿನಂದನೆ ಸಲ್ಲಿಸಿದ್ದಾರೆ. ಅಲ್ಲದೆ ಬಿಸಿಸಿಐನಿಂದಲೂ ತಂಡಕ್ಕೆ 125 ಕೋಟಿ ರೂ. ಭಾರೀ ಮೊತ್ತದ ಬಹುಮಾನ ಘೋಷಿಸಲಾಗಿದೆ.

ಆದರೆ, ದೇಶದಲ್ಲಿ ಇತರೆ ಕ್ರೀಡೆಗಳಲ್ಲಿಯೂ ಸಾಧನೆ ಮಾಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕಗಳನ್ನು ಗಳಿಸಿದ ಕ್ರೀಡಾಪಟುಗಳಿದ್ದಾರೆ. ಆ ಕ್ರೀಡಾಪಟುಗಳಿಗೂ ಸೂಕ್ತ ಬಹುಮಾನ ಹಾಗೂ ಕ್ರಿಕೆಟ್‌ನಂತೆಯೇ ಆ ಕ್ರೀಡೆಗಳಿಗೂ ಸ್ಥಾನಮಾನಗಳನ್ನು ಕಲ್ಪಿಸಬೇಕಿದೆ. ರಾಷ್ಟ್ರೀಯ ಕ್ರೀಡೆ ಹಾಕಿ, ಕುಸ್ತಿ, ಕಬಡ್ಡಿ, ವಾಲಿಬಾಲ್ ಹಾಗೂ ಅಥ್ಲೆಟಿಕ್ಸ್ ನಲ್ಲಿ ಪದಕಗಳನ್ನು ಗೆದ್ದವರಿದ್ದಾರೆ. ಅವರಿಗೂ ಕ್ರಿಕೆಟ್ ಆಟಗಾರರಿಗೆ ಸಿಗುವ ಮಾನ್ಯತೆ ಸಿಗುವಂತಾಗಬೇಕು. ಅಲ್ಲದೆ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿ ವಿಜೇತರಾದ ಕ್ರೀಡಾಪಟುಗಳಿಗೆ ಸರ್ಕಾರ ಸೂಕ್ತ ಬಹುಮಾನಗಳನ್ನು ಘೋಷಿಸಿ ಪ್ರೋತ್ಸಾಹ ನೀಡಬೇಕು.
ಕೆ.ಎಸ್.ಸುರೇಶ್‌, ಸರಗೂರು ತಾ.