ಲಂಟಾನ ಕಳೆ ಮಾನವ ಹಾಗೂ ವನ್ಯಜೀವಿಗಳ ಸಂಘರ್ಷಕ್ಕೆ ಪ್ರಮುಖ ಕಾರಣವಾಗಿದೆ. ಲಂಟಾನವು ಕಾಡಿನ ಶೇ.೬೦ರಷ್ಟು ಭಾಗವನ್ನು ಆವರಿಸಿದ್ದು, ಸ್ಥಳೀಯ ಜೀವವೈವಿಧ್ಯತೆಯನ್ನು ಹಾಳುಮಾಡಿ, ಹುಲ್ಲು ಹಾಗೂ ಪರಿಸರ ಸ್ನೇಹಿ, ಪಶು ಆಹಾರ ಗಿಡಗಳು ಬೆಳೆಯಲು ಅವಕಾಶ ಮಾಡಿಕೊಡದೆ, ಜಿಂಕೆ, ಕಡವೆ, ಕಾಡೆಮ್ಮೆಗಳ ಸಂಖ್ಯೆ ಕಡಿಮೆ ಆಗುತ್ತಿದ್ದು, ಪರಿಣಾಮವಾಗಿ ಮಾಂಸಾಹಾರಿ ಪ್ರಾಣಿಗಳಿಗೆ ಆಹಾರದ ಕೊರತೆ ಸೃಷ್ಟಿಯಾಗುತ್ತಿದೆ ಎಂದು ಅಂತಾರಾಷ್ಟ್ರೀಯ ಖ್ಯಾತಿಯ ವನ್ಯಜೀವಿ ಛಾಯಾಗ್ರಾಹಕ ಹಾಗೂ ಪರಿಸರ ತಜ್ಞರಾದ ಕೃಪಾಕರ್ ಅವರು ತಿಳಿಸಿದ್ದು, ಇದು ಅಕ್ಷರಶಃ ಸತ್ಯವಾಗಿದೆ.
ಲಂಟಾನ ಕಳೆಯನ್ನು ನಿರ್ಮೂಲ ಮಾಡಬೇಕಾದರೆ ಕೈಯಿಂದಲೇ ಕೀಳಬೇಕು, ಉದ್ಯೋಗ ಖಾತರಿ ಅಡಿ ಯೋಜನೆಯಲ್ಲಿ ಅರಣ್ಯದಲ್ಲಿ ವಾಸಿಸುತ್ತಿರುವ ಬುಡಕಟ್ಟು ಜನರನ್ನು ಬಳಸಿಕೊಂಡು ಲಂಟಾನ ಕಳೆ ತೆರವುಗೊಳಿಸಲು ಮುಂದಾದರೆ ಅವರಿಗೆ ವರ್ಷವಿಡೀ ಉದ್ಯೋಗ ನೀಡಿದಂತಾಗುತ್ತದೆ. ಈ ಬಗ್ಗೆ ಅರಣ್ಯ ಇಲಾಖೆ ಹಾಗೂ ಸಂಬಂಧಪಟ್ಟವರು ಕೂಡಲೇ ಗಮನಹರಿಸುವುದು ಅಗತ್ಯವಾಗಿದೆ.
-ಬೆಸಗರಹಳ್ಳಿ ರವಿ ಪ್ರಸಾದ್,ಮೈಸೂರು





