ಚಾಮರಾಜನಗರ ಜಿಲ್ಲೆಯ ಪ್ರವಾಸಿ ತಾಣ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಮುಖ್ಯದ್ವಾರದ ಬಳಿ ಇರುವ ಕೆಎಸ್‌ಆರ್‌ಟಿಸಿ ಬಸ್ ಟಿಕೆಟ್ ಕೌಂಟರ್‌ನಲ್ಲಿ ಭಾನುವಾರ ಮಧ್ಯಾಹ್ನ ೧೨ರ ಸಮಯದಲ್ಲಿ ಕೇರಳದ ಪ್ರವಾಸಿಗರು ಮತ್ತು ಕೆಎಸ್‌ಆರ್‌ಟಿಸಿ ಸಿಬ್ಬಂದಿ ನಡುವೆ ಟಿಕೆಟ್ ಪಡೆಯುವ ವಿಚಾರಕ್ಕೆ ಗಲಾಟೆಯಾಗಿದೆ. ಮಾತಿನಲ್ಲಿ ಬಗೆಹರಿಸಬಹುದಾಗಿದ್ದ ಈ ವಿಷಯವನ್ನು ದೊಡ್ಡದು ಮಾಡಿ ಕೆಎಸ್ ಆರ್‌ಟಿ ಸಿ ಸಿಬ್ಬಂದಿ ಹೊಡೆದಾಟ ಮಾಡಿಕೊಂಡು ಸಮಯ ಹಾಳು ಮಾಡಿದರು.
ಇದರಿಂದ ಇನ್ನಿತರ ಪ್ರವಾಸಿಗರಿಗೆ ತಡವಾಗಿದಲ್ಲದೆ ಬೇಸರವೂ ಆಯಿತು. ಕೆಎಸ್ಆರ್‌ಟಿಸಿ ಸಿಬ್ಬಂದಿ ಪ್ರಯಾಣಿಕರೊಂದಿಗೆ ಸೌಹಾರ್ದಯುತವಾಗಿ ವರ್ತಿಸಿದರೆ ಇಂತಹ ಸಮಸ್ಯೆಗಳೇ ಬರುವುದಿಲ್ಲ.
-ನಾಗೇಶ್, ಮಾನಸಗಂಗೋತ್ರಿ, ಮೈಸೂರು





