Mysore
31
scattered clouds

Social Media

ಬುಧವಾರ, 18 ಫೆಬ್ರವರಿ 2026
Light
Dark

ಓದುಗರ ಪತ್ರ: ಕರ್ನಾಟಕವೂ ಡಿಜಿಟಲ್ ಕೃಷಿ ಮಿಷನ್‌ನ ಭಾಗವಾಗಲಿ

ಡಿಜಿಟಲ್ ಯುಗದಲ್ಲಿ ಕೃಷಿ ಕ್ಷೇತ್ರಕ್ಕೂ ಡಿಜಿಟಲ್ ತಂತ್ರಜ್ಞಾನವನ್ನು ಬಳಸಿ ಬೆಳೆ ಉತ್ಪಾದನೆಯನ್ನು ಸುಧಾರಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಆರಂಭಿಸಿರುವ ಡಿಜಿಟಲ್ ಕೃಷಿ ಮಿಷನ್ ದೇಶದ ಅನೇಕ ರಾಜ್ಯಗಳಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ.

ಕರ್ನಾಟಕದಲ್ಲಿ ಈ ಯೋಜನೆಯ ಸುಳಿವೇ ಇಲ್ಲ. ಕರ್ನಾಟಕವು ಅಕ್ಕಿ, ಸಕ್ಕರೆ, ಕಬ್ಬು, ಕಾಫಿ, ರಾಗಿ, ಹಣ್ಣುಗಳು ಹಾಗೂ ತರಕಾರಿಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದೆ. ಕರ್ನಾಟಕದ ಕೃಷಿ ವೈವಿಧ್ಯತೆ ಮತ್ತು ತಂತ್ರಜ್ಞಾನ ಬಳಕೆಯು ಇತರೆ ರಾಜ್ಯಗಳಿಗೆ ಮಾದರಿಯಾಗಿದೆ. ಆದರೂ, ಡಿಜಿಟಲ್ ಕೃಷಿ ಮಿಷನ್ ರಾಜ್ಯದಲ್ಲಿ ಜಾರಿಯಲ್ಲಿ ಇಲ್ಲದಿರುವುದು ರೈತ ಸಮುದಾಯದಲ್ಲಿ ನಿರಾಶೆಯನ್ನು ಉಂಟುಮಾಡಿದೆ.

ರಾಜ್ಯವೂ ಡಿಜಿಟಲ್ ಕೃಷಿ ಮಿಷನ್ ನ ಭಾಗವಾದರೆ ರೈತರಿಗೆ ಮಣ್ಣಿನ ಗುಣಮಟ್ಟದ ನಕ್ಷೆ, ಬೆಳೆ ಸಲಹೆಗಳು, ಹವಾಮಾನ ಮಾಹಿತಿ, ಹಾಗೂ ಬೆಳೆ ಉತ್ಪಾದನಾ ಅಂದಾಜುಗಳಂತಹ ಆಧುನಿಕ ಸೌಲಭ್ಯಗಳು ದೊರೆಯುತ್ತದೆ. ಕೇಂದ್ರ ಸರ್ಕಾರವು ಈ ವಿಷಯವನ್ನು ತಕ್ಷಣ ಪರಿಗಣಿಸಿ ಕರ್ನಾಟಕವನ್ನೂ ಮಿಷನ್‌ನಲ್ಲಿ ಸೇರಿಸಬೇಕು. ಡಿಜಿಟಲ್ ಕೃಷಿ ಮಿಷನ್ ನಿಂದ ರೈತರ ಜೀವನದಲ್ಲಿ ಬದಲಾವಣೆ ತರಲು ಸಾಧ್ಯ. ಕರ್ನಾಟಕದ ಒಳಗೊಳ್ಳುವಿಕೆಯು ರಾಷ್ಟ್ರದ ಕೃಷಿ ಡಿಜಿಟಲೀಕರಣದ ಪ್ರಯತ್ನಕ್ಕೆ ನಿಜವಾದ ಶಕ್ತಿ ನೀಡುತ್ತದೆ.

– ಡಾ. ಎಚ್.ಕೆ.ವಿಜಯಕುಮಾರ್, ಬೆಂಗಳೂರು

Tags:
error: Content is protected !!