ಮೈಸೂರಿನ ಬೋಗಾದಿ-ಗದ್ದಿಗೆ ರಸ್ತೆಯ ಅಕ್ಕ ಪಕ್ಕದ ಪ್ರದೇಶಗಳಿಗೆ ಅಮೃತ್ ಯೋಜನೆಯಡಿ ಕುಡಿಯುವ ನೀರಿನ ಪೂರೈಕೆಗೆ ಪೈಪ್‌ಲೈನ್ ಅಳವಡಿಸಿ ಎರಡು ತಿಂಗಳುಗಳೇ ಕಳೆದಿದ್ದರೂ ಇನ್ನೂ ಕೂಡ ಕುಡಿಯುವ ನೀರು ಯಾರ ಮನೆಗೂ ಬಂದಿಲ್ಲ. ಕೇವಲ ಪೈಪ್ ಲೈನ್ ಅಳವಡಿಸಿರುವ ಅಧಿಕಾರಿಗಳು ನಾಪತ್ತೆಯಾಗಿದ್ದಾರೆ. ಕೆಲವು ಖಾಸಗಿ ಬಡಾವಣೆಗಳಿಗೆ ನೇರವಾಗಿ ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ ಕಾನೂನುಬದ್ಧ ಲೇಔಟ್‌ಗಳ ನಿವಾಸಿಗಳಿಗೆ ಬೋರ್‌ವೆಲ್ ನೀರೇ ಗತಿಯಾಗಿದ್ದು, ಗಡುಸು ನೀರಿನಿಂದಾಗಿ ತೀವ್ರ ಸಮಸ್ಯೆಯಾಗುತ್ತಿದೆ.
ಬೋಗಾದಿ, ಕಾವೇರಿ ನಗರ, ಖಜಾನೆ ಲೇಔಟ್, ನ್ಯಾಯಾಂಗ ಬಡಾವಣೆಯಲ್ಲಿ ಸಾವಿರಾರು ನಿವಾಸಿಗಳು ಕಬಿನಿ ನೀರಿಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು, ಸ್ಥಳೀಯ ಶಾಸಕರಾದ ಜಿ.ಟಿ.ದೇವೇಗೌಡ ಈ ಬಗ್ಗೆ ತಕ್ಷಣ ಗಮನ ಹರಿಸಿ ಈ ಬಡಾವಣೆಗಳಿಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳಬೇಕಾಗಿದೆ.
-ಸುರಭಿ ಭಟ್, ರೂಪ ನಗರ ಮೈಸೂರು





