ಮೈಸೂರಿನ ಶಾರದಾದೇವಿ ನಗರದ ವೃತ್ತವನ್ನು ನ್ಯೂ ಕಾಂತರಾಜ ಅರಸ್ ರಸ್ತೆ, ಸಿಎಫ್ ಟಿಆರ್‌ಐ ಲೇಔಟ್, ಟಿ.ಕೆ. ಲೇಔಟ್, ಆಂದೋಲನ ಸರ್ಕಲ್, ರಿಂಗ್ ರೋಡ್, ಶಾರದಾದೇವಿ ನಗರದ ಮುಖ್ಯ ರಸ್ತೆ ಸೇರಿ ಆರು ರಸ್ತೆಗಳು ಸಂಪರ್ಕಿಸುತ್ತವೆ. ಈ ವೃತ್ತ ಹೆಚ್ಚು ಜನನಿಬಿಡ ಪ್ರದೇಶವಾಗಿದ್ದು, ಅತಿ ಹೆಚ್ಚು ವಾಹನಗಳು ಸಂಚರಿಸುತ್ತವೆ.
ಆದರೆ, ಇಲ್ಲಿ ಟ್ರಾಫಿಲ್ ಸಿಗ್ನಲ್ ವ್ಯವಸ್ಥೆ ಇಲ್ಲದಿರುವುದರಿಂದ ಸಂಚಾರ ನಿಯಮ ಉಲ್ಲಂಘನೆಯಾಗುವ ಜತೆಗೆ, ವಾಹನಗಳ ದಟ್ಟಣೆಯೂ ಹೆಚ್ಚಾಗಿ ಟ್ರಾಫಿಕ್ ಸಮಸ್ಯೆಯಾಗುತ್ತಿದೆ. ಅಲ್ಲದೆ ಅಪಘಾತಗಳಾಗಿರುವ ಉದಾಹರಣೆಗಳೂ ಇವೆ.
ಆದ್ದರಿಂದ ಸಂಬಂಧಪಟ್ಟವರು ಈ ವೃತ್ತದಲ್ಲಿ ಟ್ರಾಫಿಕ್ ಸಿಗ್ನಲ್ ಅಳವಡಿಸುವ ಜತೆಗೆ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ ವಾಹನ ದಟ್ಟಣೆಯನ್ನು ನಿಯಂತ್ರಿಸಬೇಕಿದೆ.
– ಬೂಕನಕೆರೆ ವಿಜೇಂದ್ರ, ಕುವೆಂಪುನಗರ, ಮೈಸೂರು.




