Mysore
19
broken clouds

Social Media

ಶನಿವಾರ, 06 ಡಿಸೆಂಬರ್ 2025
Light
Dark

ಓದುಗರ ಪತ್ರ: ಉತ್ತನಹಳ್ಳಿ ರಸ್ತೆಯಲ್ಲಿ ಬೀದಿದೀಪ ಅಳವಡಿಸಿ

ಓದುಗರ ಪತ್ರ

ಮೈಸೂರಿನಿಂದ ನಂಜನಗೂಡಿನ ಕಡೆಗೆ ಸಾಗುವ ಮುಖ್ಯ ರಸ್ತೆ ಎಡಕ್ಕೆ ಕವಲಾಗಿ ಉತ್ತನಹಳ್ಳಿ ಕಡೆ ಹೋಗುವ ಮಾರ್ಗದಲ್ಲಿ ಬೀದಿ ದೀಪದ ವ್ಯವಸ್ಥೆಯಿಲ್ಲ ಇಲ್ಲ. ಈ ರಸ್ತೆಯು ಸಂತೆಪೇಟೆ(ಆರ್‌ಎಂಸಿ) ಹಿಂದಿರುವ ದ್ವಾರಕ್ಕೆ ಸಂಪರ್ಕ ಕಲ್ಪಿಸುತ್ತದೆ. ಈ ರಸ್ತೆಯಲ್ಲಿ ಸಾಗುವ ದೂಡ್ಡ ಮತ್ತು ಸಣ್ಣ ಪ್ರಮಾಣದ ವಾಹನಗಳಿಗೆ ಸಂತೆಪೇಟೆ ಒಳಗೆ ಪ್ರವೇಶಿಸಲು ಅವಕಾಶವಿದೆ.ಈ ಉತ್ತನಹಳ್ಳಿ ರಸ್ತೆಯು ಮುಂದುವರಿದಂತೆರಿಂಗ್ ರಸ್ತೆಗೆ ಸಂಪರ್ಕ ಕಲ್ಲಿಸುತ್ತದೆ. ಹೀಗಾಗಿ ಈ ರಸ್ತೆಯಲ್ಲಿ ಪ್ರತಿದಿನ ವಾಹನ ದಟ್ಟಣೆ ಸ್ವಲ್ಪ ಹೆಚ್ಚಾಗಿಯೇ ಇರುತ್ತದೆ.

ಉತ್ತನಹಳ್ಳಿಯ ಬಳಿ ಯುವ ದಸರಾ ಆಯೋಜನೆಗೊಳ್ಳುವುದರಿಂದ ಈ ವೇಳೆ ವಾಹನ ದಟ್ಟಣೆ ನಿರೀಕ್ಷೆಗಿಂತಲೂ ಹೆಚ್ಚಿರುತ್ತದೆ. ಈ ರಸ್ತೆಯಲ್ಲಿ ರಾತ್ರಿ ವೇಳೆ ಎದುರಿಗೆ ಬರುವ ವಾಹನಗಳ ಪ್ರಖರ ಬೆಳಕು ಕಣ್ಣು ಕುಕ್ಕುತ್ತದೆ. ಹೀಗಾಗಿ ವಾಹನ ಸವಾರರಿಗೆ ಮಾರ್ಗ ಸರಿಯಾಗಿ ಕಾಣದೆ ಗಲಿಬಿಲಿಗೊಳ್ಳುವ ಸಂದರ್ಭಗಳೇ ಹೆಚ್ಚು. ಇದರಿಂದ ಅಪಘಾತ ಸಂಭವಿಸುವ ಸಾಧ್ಯತೆಯಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ರಸ್ತೆಯ ಎರಡೂ ಬದಿಯಲ್ಲಿ ಬೀದಿ ದೀಪ ಅಳವಡಿಸಿ, ವಾಹನ ಸವಾರರು ಮತ್ತು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲು ಮುಂದಾಗಬೇಕಿದೆ.

-ಎಂ.ಲಿಂಗರಾಜು, ಹೊಸಹುಂಡಿ, ಮೈಸೂರು ತಾ.

Tags:
error: Content is protected !!