Mysore
27
scattered clouds

Social Media

ಭಾನುವಾರ, 07 ಡಿಸೆಂಬರ್ 2025
Light
Dark

ಓದುಗರ ಪತ್ರ: ‘ಕರ್ನಾಟಕ ರತ್ನ’ಕ್ಕೆ ಹೆಚ್ಚಿದ ಮೌಲ್ಯ

ಓದುಗರ ಪತ್ರ

ಕನ್ನಡ ಚಿತ್ರರಂಗ ಕಂಡ ಅತ್ಯಂತ ಪ್ರತಿಭಾವಂತ ನಟರಾದ ಡಾ.ವಿಷ್ಣುವರ್ಧನ್ ಹಾಗೂ ಬಿ. ಸರೋಜಾದೇವಿ ಅವರಿಗೆ ಮರ ಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ನೀಡಿದ ಕರ್ನಾಟಕ ಸರ್ಕಾರಕ್ಕೆ ಧನ್ಯವಾದಗಳು.ಡಾ. ವಿಷ್ಣುವರ್ಧನ್ ನಟಿಸಿದ್ದ ಎಷ್ಟೋ ಚಲನಚಿತ್ರ ಗಳು ಇಂದಿಗೂ ಕನ್ನಡ ಚಿತ್ರರಂಗದಲ್ಲಿ ಮೈಲಿ ಗಲ್ಲಾಗಿ ಉಳಿದಿವೆ.

ವಿಷ್ಣುವರ್ಧನ್ ನಿಧನರಾಗಿ ಹದಿನಾರು ವರ್ಷಗಳ ನಂತರ ಅವರಿಗೆ ಮರ ಣೋತ್ತರವಾಗಿ ಪ್ರಶಸ್ತಿ ನೀಡಿದ್ದು ಸಿದ್ದರಾಮಯ್ಯ ಸರ್ಕಾರ ಮಾಡಿದ ಅಪರೂಪದ ಒಳ್ಳೆಯ ಕೆಲಸಗಳಲ್ಲಿ ಒಂದಾಗಿದೆ. ಕಡೆಗೂ ಭಾರತೀ ವಿಷ್ಣುವರ್ಧನ್, ಅನಿರುದ್ಧ ವಿಷ್ಣುವರ್ಧನ್, ವಿಷ್ಣುವರ್ಧನ್ ಕುಟುಂಬ ಹಾಗೂ ಅವರ ಲಕ್ಷಾಂತರ ಅಭಿಮಾನಿಗಳು, ಅಂತೆಯೇ ಕನ್ನಡ ಚಿತ್ರ ಅಭಿಮಾನಿಗಳಿಗೆ ಸಂತಸದ ಕ್ಷಣ ಇದಾಗಿದೆ. ಅಭಿಜಾತ ಕಲಾವಿದೆ ಬಿ. ಸರೋಜಾದೇವಿ ಅವರಿಗೂ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಸಿಕ್ಕಿರುವುದು ಸಂತಸದ ವಿಚಾರ.

ಅವರು ನಟಿಸಿರುವ ಸಾಕಷ್ಟು ಚಿತ್ರಗಳು ಅವರ ಅಭಿನಯವನ್ನು ಇಂದಿಗೂ ನೆನಪಿಗೆ ತರುತ್ತವೆ. ಅತ್ಯಂತ ಯೋಗ್ಯ ವ್ಯಕ್ತಿಗಳಿಗೆ ಸಿಕ್ಕ ಕರ್ನಾಟಕ ರತ್ನ ಪ್ರಶಸ್ತಿ ತನ್ನ ಮೌಲ್ಯವನ್ನು ಹೆಚ್ಚಿಸಿಕೊಂಡಿದೆ.

-ಶಿವಮೊಗ್ಗ ನಾ. ದಿನೇಶ್ ಅಡಿಗ,ಮೈಸೂರು

Tags:
error: Content is protected !!