ಪೋಷಕರು ಮಕ್ಕಳನ್ನು ಶಾಲೆಗಳಿಗೆ ಕಳುಹಿಸುವಾಗ ಲಂಚ್ ಬ್ಯಾಗ್ ಜೊತೆಯಲ್ಲಿ ನೀರಿನ ಬಾಟಲಿಯನ್ನೂ ಕೊಟ್ಟು ಕಳುಹಿಸುತ್ತಾರೆ. ಆದರೆ ಊಟದ ಸಮಯದಲ್ಲಿ ಮಕ್ಕಳು ಸರಿಯಾಗಿ ನೀರು ಕುಡಿಯದೇ ಇರುವುದರಿಂದ ಅವರಲ್ಲಿ ನೀರಿನಾಂಶ ಕೊರತೆ ಕಂಡುಬರುವುದು ಸಹಜ.
ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಶಾಲಾ ಮಕ್ಕಳನ್ನು ನೀರು ಕುಡಿಯಲು ಉತ್ತೇಜಿಸುವ ಸಲುವಾಗಿ ದಿನಕ್ಕೆ ಮೂರು ಬಾರಿ ವಾಟರ್ ಬೆಲ್ (ನೀರಿನ ಘಂಟೆ) ಬಾರಿಸುವ ಕಾರ್ಯಕ್ರಮ ತರಲು ಉದ್ದೇಶಿಸಿರುವುದು ಶ್ಲಾಘನೀಯ. ಈ ಕಾರ್ಯಕ್ರಮ ಶೀಘ್ರದಲ್ಲಿ ಅನುಷ್ಠಾನಕೊಂಡು ಪೋಷಕರ ಆತಂಕವನ್ನು ನಿವಾರಿಸಲಿ ಎಂಬುವುದೇ ಆಶಯ.
– ಪಿ.ಸಿ.ಕಂಗಾಣಿ ಸೋಮು, ಕ್ಯಾತಮಾರನಹಳ್ಳಿ, ಮೈಸೂರು





