ಓವಲ್ ಮೈದಾನದಲ್ಲಿ ನಡೆದ ೫ ನೇ ಹಾಗೂ ಅಂತಿಮ ಟೆಸ್ಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ೬ ರನ್‌ಗಳ ವಿರೋಚಿತ ಗೆಲುವು ಸಾಧಿಸಿರುವುದು ಪ್ರಶಂಸನೀಯ ಸರಣಿಯಲ್ಲಿ ೨-೨ ಸಮಬಲ ಸಾಧಿಸುವ ಮುಖಾಂತರ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಅಂಕಪಟ್ಟಿಯಲ್ಲಿ ಭಾರತವು ೩ ನೇ ಸ್ಥಾನಕ್ಕೆ ಏರಿರುವುದು ಸ್ವಾಗತಾರ್ಹ.
ಶುಭ್ಮನ್ ಗಿಲ್ ನಾಯಕತ್ವದ ಯುವಪಡೆಯ ಪ್ರತಿಯೊಬ್ಬರೂ ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಆಟವಾಡಿ ತಂಡ ಸಮಬಲ ಸಾಧಿಸುವಲ್ಲಿ ಶ್ರಮ ವಹಿಸಿದ್ದಾರೆ. ಆಂಗ್ಲರ ಕೈಯಿಂದ ಗೆಲುವು ಕಸಿದುಕೊಂಡ, ಈ ಪಂದ್ಯದ ಗೆಲುವು ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಸದಾ ನೆನಪಿನಲ್ಲಿ ಉಳಿಯುತ್ತದೆ.
– ಬೆಸಗರಹಳ್ಳಿ ರವಿ ಪ್ರಸಾದ್, ಮೈಸೂರು





