ರಾಜ್ಯ ಸರ್ಕಾರ ಮಂಡಿಸಿದ ದ್ವೇಷ ಭಾಷಣ ಮಸೂದೆ ೨೦೨೫ ಗಂಭೀರ ಚರ್ಚೆಗೆ ಗ್ರಾಸವಾಗಿದೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ವ್ಯಾಪಕ ಪ್ರಭಾವ, ತಪ್ಪು ಮಾಹಿತಿಯ ಹರಿವು ಮತ್ತು ರಾಜಕೀಯ ಧ್ರುವೀಕರಣ ಪರಿಣಾಮವಾಗಿ ದ್ವೇಷ ಭಾಷಣ ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ ದ್ವೇಷ ಭಾಷಣ ನಿಯಂತ್ರಿಸುವ ನ್ಯಾಯಸಮ್ಮತ ಕಾನೂನು ತಂದಿರುವುದು ಸ್ವಾಗತಾರ್ಹ. ಆದರೆ, ಈ ಕಾನೂನು ಜಾರಿಗೆ ಬಂದಾಗ ಸ್ವತಂತ್ರ ಅಭಿಪ್ರಾಯ, ಸಾರ್ವಜನಿಕ ಚರ್ಚೆ ಮತ್ತು ಪ್ರಜಾಸತ್ತಾತ್ಮಕ ಸಂವಾದಕ್ಕೆ ಅಡ್ಡಿಯಾಗಬಾರದು. ಇದರ ಬಗ್ಗೆ ನಾಗರಿಕರಿಗಿರುವ ಆತಂಕವನ್ನು ಕೂಡ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು.
ದ್ವೇಷ ಭಾಷಣ ತಡೆಯುವ ಹೆಸರಿನಲ್ಲಿ ಸಾಮಾನ್ಯ ಟೀಕೆಗಳು ಅಥವಾ ರಾಜಕೀಯ ಭಿನ್ನಾಭಿಪ್ರಾಯಗಳು ದಮನಗೊಳ್ಳುವ ಪರಿಸ್ಥಿತಿ ಬರಬಾರದು. ಆದ್ದರಿಂದ ಈ ಮಸೂದೆ ಬಗ್ಗೆ ಎಲ್ಲಾ ಪಕ್ಷಗಳು, ತಜ್ಞರು ಮತ್ತು ನಾಗರಿಕರು ಸೇರಿ ವಿಸ್ತ ತ ಚರ್ಚೆ ನಡೆಸಿ ಮಸೂದೆಯನ್ನು ಸ್ಪಷ್ಟ, ನಿಷ್ಪಕ್ಷಪಾತ ಮತ್ತು ದುರುಪಯೋಗ ಮಾಡಲು ಅವಕಾಶವಿಲ್ಲದಂತೆ ಕಾರ್ಯರೂಪಕ್ಕೆ ತರುವುದು ಮುಖ್ಯ.
-ಡಾ. ಎಚ್.ಕೆ. ವಿಜಯಕುಮಾರ್, ಬೆಂಗಳೂರು





