Mysore
26
scattered clouds

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ಓದುಗರ ಪತ್ರ: ಹೇರ್ ಡೈ: ಹಾನಿಕಾರಕ ರಾಸಾಯನಿಕಗಳನ್ನು ನಿಷೇಧಿಸಿ

ಓದುಗರ ಪತ್ರ

ಇತ್ತೀಚಿನ ದಿನಗಳಲ್ಲಿ ಹೇರ್‌ಡೈ (ಕೂದಲಿಗೆ ಹಚ್ಚುವ ಕೃತಕ ಬಣ್ಣ) ಉಪಯೋಗ ಸರ್ವೇ ಸಾಮಾನ್ಯವಾಗಿದೆ. ಹೇರ್ ಡೈಗಳಲ್ಲಿ ಇರುವ ಹಲವಾರು ರಾಸಾಯನಿಕಗಳು ನಮ್ಮ ಆರೋಗ್ಯಕ್ಕೆ ಹಾನಿ ಉಂಟು ಮಾಡುತ್ತವೆ ಎಂಬುದು ವರದಿಗಳಿಂದ ತಿಳಿದು ಬಂದಿದೆ.

ಹೇರ್ ಡೈಯಲ್ಲಿರುವ ಪ್ಯಾರಾಫೆನಿಲೆಂಡಿಯಾಮಿನ್, ಟೋಲುಯೆನ್-೨. ೫-ಡಯಾಮಿನ್  ಮುಂತಾದ ರಾಸಾಯನಿಕಗಳು ತ್ವಚೆಗೆ ಹಾನಿ ಮಾಡಬಹುದು, ಅಲರ್ಜಿಗಳನ್ನು ಉಂಟುಮಾಡಬಹುದು ಮತ್ತು ಕೆಲವೊಮ್ಮೆ ಗಂಭೀರ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗಬಹುದು. ಇತ್ತೀಚೆಗೆ, ಇತರ ದೇಶಗಳು ಈ ಹಾನಿಕರ ರಾಸಾಯನಿಕಗಳ ಬಳಕೆಯನ್ನು ನಿಯಂತ್ರಿಸಲು ಕಠಿಣ ಕ್ರಮಗಳನ್ನು ಕೈಗೊಂಡಿವೆ. ಯುರೋಪಿಯನ್ ಯೂನಿಯನ್ ಹೇರ್ ಡೈಗಳಲ್ಲಿ ಕೆಲವು ಹಾನಿಕರ ರಾಸಾಯನಿಕಗಳನ್ನು ನಿಷೇಧಿಸಿತು. ಅಮೆರಿಕದ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ ಕೂಡ, ಈ ರಾಸಾಯನಿಕಗಳನ್ನು ಹೆಚ್ಚಾಗಿ ಪರಿಶೀಲಿಸುಮಾಡಿ, ಸುರಕ್ಷತೆ ಹೆಚ್ಚಿಸಲು ಕ್ರಮಗಳನ್ನು ಜಾರಿಗೆ ತಂದಿದೆ.

ಭಾರತದಲ್ಲಿಯೂ, ಹೇರ್ ಡೈಗಳಲ್ಲಿ ಹಾನಿಕರ ರಾಸಾಯನಿಕಗಳ ಬಳಕೆಯನ್ನು ನಿಯಂತ್ರಿಸಲು ಸರಕಾರವು ಕ್ರಮಗಳನ್ನು ಕೈಗೊಳ್ಳಬೇಕು. ಸರಕಾರವು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು, ಸಾಮಾಜಿಕ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳನ್ನು ಬಳಸಿ ಸುರಕ್ಷಿತ ಆಯ್ಕೆಗಳನ್ನು ಮಾಡಲು ಪ್ರೋತ್ಸಾಹಿಸಬೇಕು.

-ಡಾ. ಎಚ್.ಕೆ. ವಿಜಯಕುಮಾರ್, ಬೆಂಗಳೂರು

Tags:
error: Content is protected !!