ರೋಗಿಗಳಿಗೆ ಔಷಧಿಯೇ ಜೀವ ರಕ್ಷಕ, ಅಂಥವರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಔಷಧ ಮತ್ತು ವೈದ್ಯಕೀಯ ಸಾಧನಗಳ ಮೇಲಿನ ಜಿಎಸ್‌ಟಿ ಯನ್ನು ಶೇ. ೧೨ ರಿಂದ ಶೇ. ೫ಕ್ಕೆ ಕಡಿತಗೊಳಿಸಿ ಉತ್ತಮ ಕೆಲಸ ಮಾಡಿದೆ.
ಬಡ ಮತ್ತು ಮಧ್ಯಮ ವರ್ಗಗಳ ರೋಗಿಗಳಿಗೆ ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಬಹಳ ಅನುಕೂಲವಾಗುತ್ತದೆ. ಇಂತಹ ಮತ್ತಷ್ಟು ಜನೋಪಯೋಗಿ ಕೆಲಸಗಳನ್ನು ಎಲ್ಲ ಸರ್ಕಾರಗಳೂ ಮಾಡಿ, ಜನ ಕಲ್ಯಾಣಕ್ಕೆ ಮುಂದಾಗಲಿ.
– ಪಿ.ಸಿ. ಕಂಗಾಣಿಸೋಮು, ಕ್ಯಾತಮಾರನಹಳ್ಳಿ,ಮೈಸೂರು





