ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಮಹಿಳೆಯರಿಗೆ ಸರ್ಕಾರದಿಂದ ವಿತರಿಸುವ ಉಚಿತ ಟಿಕೆಟ್‌ಗಳನ್ನು ಪುರುಷರಿಗೂ ವಿತರಿಸಲಾಗುತ್ತಿದೆ. ಸಿಟಿ ಬಸ್ ನಿಲ್ದಾಣದಿಂದ ಕುವೆಂಪುನಗರಕ್ಕೆ ತೆರಳಲು ಓರ್ವ ಪುರುಷ ಹಣ ಕೊಟ್ಟು ಟಿಕೆಟ್ ಕೇಳಿದರೆ ನಿರ್ವಾಹಕ ಮಹಿಳೆಯರಿಗೆ ಉಚಿತವಾಗಿ ವಿತರಿಸುವ ಟಿಕೆಟ್ ಕೊಟ್ಟು ಆ ಹಣವನ್ನು ತನ್ನ ಜೇಬಿಗೆ ಇಳಿಸಿದ್ದಾರೆ.
ವಿದ್ಯಾವಂತರಾದರೆ ಟಿಕೆಟ್ ಪರಿಶೀಲಿಸಿ ನಿರ್ವಾಹಕರಿಗೆ ತಿಳಿಸಿ ಉಚಿತ ಟಿಕೆಟ್ ಬದಲಾಯಿಸಿ ಮಾಮೂಲಿ ಟಿಕೆಟ್ ಪಡೆಯಬಹುದು. ಅದೇ ಹಳ್ಳಿಯವರಾದರೆ ಅವರು ಸುಮ್ಮನೆ ಟಿಕೆಟ್ ಅನ್ನು ಜೇಬಿನಲ್ಲಿ ಇಟ್ಟುಕೊಳ್ಳುತ್ತಾರೆ. ಟಿಕೆಟ್ ತಪಾಸಣಾ ಅಧಿಕಾರಿ ಬಂದರೆ ನಿರ್ವಾಹಕ ಮಾಡಿದ ತಪ್ಪಿಗೆ ಪ್ರಯಾಣಿಕರೂ ದಂಡ ಪಾವತಿಸಬೇಕಾಗುತ್ತದೆ. ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಇಂತಹ ಅಕ್ರಮಗಳನ್ನು ಪತ್ತೆ ಹಚ್ಚುವ ಮೂಲಕ ನಿಗಮಕ್ಕೆ ಆಗುತ್ತಿರುವ ನಷ್ಟವನ್ನು ತಪ್ಪಿಸಲು ಕ್ರಮ ಕೈಗೊಳ್ಳಬೇಕಾಗಿದೆ.
-ಪ್ರದೀಪ್‌ಕುಮಾರ್, ಕುವೆಂಪುನಗರ, ಮೈಸೂರು





