ಮೈಸೂರಿನ ಜೆಎಲ್‌ಬಿ ರಸ್ತೆಯಲ್ಲಿ ರಾಮಸ್ವಾಮಿ ವೃತ್ತದ ಸಮೀಪ ಶಾಸಕರ ಅನುದಾನದಲ್ಲಿ ಹೊಸದಾಗಿ ಬಸ್ ತಂಗುದಾಣವನ್ನು ನಿರ್ಮಿಸಲಾಗಿದೆ. ಆದರೆ ಬಸ್ ತಂಗುದಾಣದ ಮೂಲಕ ಹಾದು ಹೋಗಿರುವ ನೀರಿನ ಪೈಪ್ ಒಡೆದು ಹೋಗಿರುವುದರಿಂದ ನಿಲ್ದಾಣದ ಒಳಗೆ ನೀರು ಹರಿಯುತ್ತಿದೆ. ಇದರಿಂದ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗುತ್ತಿದೆ.
ತಂಗುದಾಣದ ನೆಲಹಾಸು ಟೈಲ್ಸ್‌ಗಳನ್ನು ಅಳವಡಿಸಿರುವುದರಿಂದ ಪ್ರಯಾಣಿಕರು ಆಕಸ್ಮಿಕವಾಗಿ ಬಿದ್ದು ಗಾಯಗೊಂಡರೆ ಯಾರು ಹೊಣೆ. ಇದು ಪ್ರಮುಖ ರಸ್ತೆಯಾಗಿದ್ದು, ಜನಪ್ರತಿನಿಧಿಗಳು , ಪಾಲಿಕೆ ಅಧಿಕಾರಿಗಳು ನಿತ್ಯ ಸಂಚರಿಸುತ್ತಾರೆ. ಆದರೆ ನೀರಿನ ಪೈಪ್ ಒಡೆದು ಹೋಗಿರುವುದು ಅವರ ಗಮನಕ್ಕೆ ಬಾರದಿರುವುದು ವಿಪರ್ಯಾಸದ ಸಂಗತಿಯಾಗಿದೆ.
ಸಂಬಂಧಪಟ್ಟವರು ಕೂಡಲೇ ಬಸ್ ತಂಗುದಾಣದಲ್ಲಿ ಒಡೆದು ಹೋಗಿರುವ ಪೈಪ್‌ಅನ್ನು ದುರಸ್ತಿ ಮಾಡಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಬೇಕಾಗಿದೆ.
-ಭಾರ್ಗವ, ಮೈಸೂರು





