ಮೈಸೂರಿನ ಕುಪ್ಪಣ್ಣ ಪಾರ್ಕ್ ಬಳಿ ಚರಂಡಿಗೆ ಹಾಳಾಗಿದ್ದ ಹಳೇ ಸ್ಲ್ಯಾಬ್‌ಗಳನ್ನು ತೆರವುಗೊಳಿಸಿ ಹೊಸ ಸ್ಲ್ಯಾಬ್‌ಗಳನ್ನು ಅಳವಡಿಸಲಾಗಿದೆ. ಕಾಂಕ್ರೀಟ್ ಸ್ಲ್ಯಾಬ್‌ಗಳನ್ನು ಅಚ್ಚು ಹಾಕಿದ ನಂತರ ಅವುಗಳನ್ನು ಸಾಗಿಸಲು ಎರಡೂ ಬದಿಗಳಲ್ಲಿ ಕಬ್ಬಿಣದ ಹಿಡಿಕೆಗಳನ್ನು ಹಾಕಿರುತ್ತಾರೆ. ಚರಂಡಿಯ ಮೇಲೆ ಸ್ಲ್ಯಾಬ್‌ಗಳನ್ನು ಅಳವಡಿಸಿದ ನಂತರ ಹಿಡಿಕೆಗಳನ್ನು ಸುತ್ತಿಗೆಯಿಂದ ಹೊಡೆದು ಬಾಗಿಸಬೇಕು.
ಆದರೆ ಬಾಗಿಸದೇ ಹಾಗೇ ಬಿಟ್ಟಿರುವುದರಿಂದ -ಫುಟ್‌ಪಾತ್‌ನಲ್ಲಿ ಸಂಚರಿಸುವವರು ಸ್ಲ್ಯಾಬ್‌ನ ಕಬ್ಬಿಣದ ಹಿಡಿಕೆಯನ್ನು ಕಾಲಿಗೆ ಬಡಿಸಿಕೊಂಡು ಗಾಯಗೊಳ್ಳುತ್ತಿದ್ದಾರೆ. ಸಂಬಂಧಪಟ್ಟವರು ಈ ಕುರಿತು ಕ್ರಮವಹಿಸಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ನಿವಾರಿಸಬೇಕಾಗಿದೆ.
-ಶರತ್, ಮೈಸೂರು





