ನಾಡಿನ ಖ್ಯಾತ ಕಾದಂಬರಿಕಾರ, ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತ ಸಾಹಿತಿ, ಪದ್ಮ ಭೂಷಣ ಡಾ.ಎಸ್.ಎಲ್.ಭೈರಪ್ಪನವರ ಹಠಾತ್ ನಿಧನ ದೇಶದ ಸಾಂಸ್ಕೃತಿಕ ವಲಯಕ್ಕೆ ತುಂಬಲಾಗದ ನಷ್ಟ ಉಂಟು ಮಾಡಿದೆ.ತಮ್ಮ ವೈವಿಧ್ಯಮಯ ಕಾದಂಬರಿಗಳ ಮೂಲಕ, ದೇಶ ವಿದೇಶಗಳಲ್ಲಿ ತಮ್ಮದೇ ಆದ ಅಭಿಮಾನಿಗಳನ್ನು ಹೊಂದಿದ್ದರು.
ಅವರ ‘ಪರ್ವ’ ಕಾದಂಬರಿಯನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಚೀನಿ ಮತ್ತು ರಷ್ಯನ್ ಭಾಷೆಗಳಿಗೆ ಅನುವಾದಗೊಳಿಸಿರುವುದು ಸಮಸ್ತ ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ. ತಬ್ಬಲಿಯು ನೀನಾದೆ ಮಗನೆ, ನಾಯಿ ನೆರಳು, ಪರ್ವ, ದಾಟು, ನೆಲೆ, ಸಾರ್ಥ, ಧರ್ಮಶ್ರೀ, ಮತದಾನ, ಆವರಣ, ತಂತು, ಮಂದ್ರ ಮುಂತಾದ ವಿಭಿನ್ನ ಕಥಾ ವಸ್ತು ಒಳಗೊಂಡ ಕೃತಿಗಳನ್ನು ರಚಿಸಿದ್ದಾರೆ. ೧೯೫೮ ರಲ್ಲಿ ‘ ಭೀಮಕಾಯ‘ ಕೃತಿಯ ಮೂಲಕ ಕನ್ನಡ ಸಾರಸ್ವತ ಲೋಕವನ್ನು ಪ್ರವೇಶಿಸಿದ ಡಾ.ಎಸ್.ಎಲ್.ಭೈರಪ್ಪ ಹಲವಾರು ಅಮೂಲ್ಯ ಕೃತಿಗಳನ್ನು ರಚಿಸಿದ್ದಾರೆ.
-ಕೆ.ವಿ.ವಾಸು, ವಿವೇಕಾನಂದ ನಗರ, ಮೈಸೂರು





