ಮೈಸೂರು ದಸರಾ ಅಂಗವಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗುತ್ತಿದೆ. ಆದರೆ ಕೆಲವು ಹಳೆಯ ಬಡಾವಣೆಗಳಿಗೆ ಪ್ರತಿ ವರ್ಷವೂ ದಸರಾ ದೀಪಾಲಂಕಾರ ಮಾಡುವುದಿಲ್ಲ.
ಮೈಸೂರಿನ ಅರಸರಿಗೂ ನಗರದ ಕೆಲವು ಹಳೆಯ ಬಡಾವಣೆಗಳಿಗೂ ಅವಿನಾಭಾವ ಸಂಬಂಧ ಇತ್ತು. ಈಗಲೂ ಈ ಬಡಾವಣೆಗಳ ಜನರು ರಾಜವಂಶಸ್ಥರನ್ನು ಪೂಜನೀಯ ಭಾವನೆಯಿಂದ ಸ್ಮರಿಸುತ್ತಾರೆ. ದಸರಾವನ್ನು ದೊಡ್ಡ ಹಬ್ಬವಾಗಿ ಆಚರಿಸುವ ಈ ಬಡಾವಣೆಗಳ ರಸ್ತೆಗಳಿಗೆ ವಿದ್ಯುತ್ ದೀಪಾಲಂಕಾರ ಮಾಡದೇ ಇರುವುದು ಬೇಸರದ ಸಂಗತಿ. ಈ ಬಾರಿಯಾದರೂ ಮೈಸೂರಿನ ಹಳೇ ಬಡಾವಣೆಗಳಿಗೂ ದೀಪಾ ಲಂಕಾರ ಮಾಡುವ ಮೂಲಕ ಸ್ಥಳೀಯರು ಮತ್ತು ದಸರಾ ಪರಂಪರೆಯ ಅನುಬಂಧವನ್ನು ಹೆಚ್ಚಿಸಬೇಕಾಗಿದೆ.
-ಪಿ.ಸಿ.ಕಂಗಾಣಿ ಸೋಮು, ಕ್ಯಾತಮಾರನಹಳ್ಳಿ, ಮೈಸೂರು





