Mysore
28
scattered clouds

Social Media

ಶನಿವಾರ, 06 ಡಿಸೆಂಬರ್ 2025
Light
Dark

ಓದುಗರ ಪತ್ರ: ದಸರಾ ಉದ್ಘಾಟನೆ : ಕೋರ್ಟ್ ತೀರ್ಪು ಸ್ವಾಗತಾರ್ಹ

ಓದುಗರ ಪತ್ರ

ಮೈಸೂರು ದಸರಾ ಉದ್ಘಾಟನೆಯನ್ನು ಸಾಹಿತಿ ಬಾನು ಮುಷ್ತಾಕ್ ಅವರು ಮಾಡಬಾರದೆಂದು ಹೈಕೋರ್ಟ್‌ನಲ್ಲಿ ಮಾಜಿ ಸಂಸದರೊಬ್ಬರು ಹಾಗೂ ಸಾರ್ವಜನಿಕರೊಬ್ಬರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ಬಾನು ಮುಷ್ತಾಕ್ ಅವರ ಆಯ್ಕೆ ಸಂವಿಧಾನಬದ್ಧವಾಗಿದೆ ಎಂದುಹೈಕೋರ್ಟ್ ಅರ್ಜಿಯನ್ನು ವಜಾಮಾಡಿದ್ದು, ಈ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಬೇರೆ ಧರ್ಮಿಯರಾದ ಕವಿ ನಿಸಾರ್ ಅಹಮದ್ ದಸರಾ ಉದ್ಘಾಟನೆ ಮಾಡಿದ್ದರು.

ಆಗ ಯಾವುದೇ ಅಪಸ್ವರ ಇರಲಿಲ್ಲ. ಬಾನು ಮುಷ್ತಾಕ್ ಮಹಿಳೆ ಎಂಬ ಕಾರಣಕ್ಕೆ, ಪಿತೃಪ್ರದಾನ ಕೊಳಕು ಮನಸ್ಸಿನ ಸನಾತನಿಗಳು ಕೋರ್ಟ್ ಮೆಟ್ಟಿಲೇರಿದ್ದರು. ಭಾರತಕ್ಕೆ ಸ್ವಾತಂತ್ರ್ಯ ಬಂದು ೭೫ ವರ್ಷಗಳೇ ಕಳೆದಿದ್ದರೂ ಮಹಿಳೆಯನ್ನು ಇಂದಿಗೂ ಎರಡನೇ ದರ್ಜೆ ಪ್ರಜೆಯಾಗಿ ಎಲ್ಲ ಧರ್ಮಗಳೂ ತುಳಿಯುತ್ತಿವೆ ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿ.

ಅಂತಾರಾಷ್ಟ್ರೀಯ ಬುಕರ್ ಪ್ರಶಸ್ತಿ ಪುರಸ್ಕೃತರಾದ ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟನೆಗಾಗಿ ಆಯ್ಕೆ ಮಾಡಿದ ಪ್ರಗತಿಪರ ಮುಖ್ಯಮಂತ್ರಿಗಳಿಗೆ, ಆಯ್ಕೆ ಸಂವಿಧಾನಬದ್ಧವಾಗಿದೆ ಎಂದು ಅರ್ಜಿಯನ್ನು ವಜಾ ಮಾಡಿದ ನ್ಯಾಯಾಲಯಕ್ಕೆ ಹಾಗೂ ಸರ್ಕಾರದ ಪರವಾಗಿ ವಾದ ಮಂಡಿಸಿದ ವಕೀಲರಾದ ಶಶಿಕಿರಣ್ ಅವರಿಗೂ ಅಭಿನಂದನೆಗಳು.

-ರತ್ನ ಹುಲ್ಲಹಳ್ಳಿ ವಕೀಲರು.

Tags:
error: Content is protected !!