Mysore
24
clear sky

Social Media

ಶನಿವಾರ, 24 ಜನವರಿ 2026
Light
Dark

ಓದುಗರ ಪತ್ರ:  ರಸ್ತೆ ಗುಂಡಿ ಮುಚ್ಚಿಸಿ

ಓದುಗರ ಪತ್ರ

ಮೈಸೂರು ನಗರದ ಆದಿಚುಂಚನಗಿರಿ ಮುಖ್ಯ ರಸ್ತೆಯ, ಕಾವೇರಿ ಶಾಲೆ, ಶ್ರೀ ಚಂದ್ರಮೌಳೇಶ್ವರ ದೇವಾಲಯ ಮತ್ತು ಎಂಡಿಎ ಕಮಿಷನರ್ ಮನೆಯ ಮುಂಭಾಗದ ಕಾವೇರಿ ಶಾಲೆಯ ಸರ್ಕಲ್, ಆದಿಚುಂಚನಗಿರಿ ರಸ್ತೆಯಿಂದ ಜ್ಞಾನ ಗಂಗಾ ಶಾಲೆಯ ಕಡೆಗೆ ಹೋಗುವ ರಸ್ತೆಯಲ್ಲಿ ಒಳಚರಂಡಿ ವ್ಯವಸ್ಥೆ ಕಲ್ಪಿಸಲು ಕಳೆದ ಆರು ತಿಂಗಳುಗಳ ಹಿಂದೆ ಅಗೆದಿರು ವುದರಿಂದ ಈ ರಸ್ತೆಯು ಗುಂಡಿ ಮಯವಾಗಿದೆ, ಈ ಕಾರಣದಿಂದ ಪ್ರತಿ ದಿನವೂ ಇಲ್ಲಿ ಒಂದಿಲ್ಲೊಂದು ಅಪಘಾತ ಸಂಭವಿಸುತ್ತಲೇ ಇದೆ..

ಬಹುತೇಕ ನಗರ ಪಾಲಿಕೆಯ ಅಧಿಕಾರಿಗಳು ಈ ರಸ್ತೆಯಲ್ಲೇ ಓಡಾಡುತ್ತಿದ್ದರೂ, ಕನಿಷ್ಠ ಪಕ್ಷ ಈ ಗುಂಡಿಗಳನ್ನು ಮುಚ್ಚಿಸುವಷ್ಟು ತಿಳಿವಳಿಕೆ ಅವರಿಗೆ ಇಲ್ಲವೇ? ಇದು ಕೇವಲ ಆದಿಚುಂಚನಗಿರಿ ರಸ್ತೆಯ ಸಮಸ್ಯೆಯಲ್ಲ, ಒಳಚರಂಡಿ ವ್ಯವಸ್ಥೆಗಾಗಿ ರಸ್ತೆಯನ್ನು ಅಗೆದು ಹಾಗೆ ಯೇ ಬಿಟ್ಟಿರುವ ಹತ್ತಾರು ರಸ್ತೆಗಳು ಮೈಸೂರು ನಗರದಲ್ಲಿವೆ.  ಮೊದಲು ಅಗೆದಿರುವ ರಸ್ತೆಗಳ ಗುಂಡಿಗಳನ್ನು ಮುಚ್ಚಿ ಸಾರ್ವಜನಿಕರು ಸುಗಮವಾಗಿ ಸಂಚರಿಸಲು ಅನುಕೂಲ ಕಲ್ಪಿಸುವುದು ಅಗತ್ಯ.

 -ಬೂಕನಕೆರೆ ವಿಜೇಂದ್ರ, ಕುವೆಂಪು ನಗರ, ಮೈಸೂರು

Tags:
error: Content is protected !!