ಮೈಸೂರು ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ನಗರದ ರಾಜಬೀದಿಯಿಂದ ಹಿಡಿದು ಎಲ್ಲಾ ಪ್ರಮುಖ ರಸ್ತೆಗಳ ಮುಖ್ಯ ದ್ವಾರಗಳಿಗೆ ಬೃಹದಾಕಾರದ ಸ್ವಾಗತ ಕಮಾನುಗಳನ್ನು ಅಳವಡಿಸಲಾಯಿತು. ತಾತ್ಕಾಲಿಕ ಕಮಾನುಗಳು ಹಾಗೆಯೇ ಇವೆ. ತಾತ್ಕಾಲಿಕ ಸ್ವಾಗತ ಕಮಾನುಗಳು ಗಾಳಿ ಮಳೆಗೆ ವಾಹನಗಳ ಮೇಲೆ ಬಿದ್ದು ಅವಘಡಗಳಾಗುವ ಸಾಧ್ಯತೆಗಳಿರುತ್ತವೆ. ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸಿಬ್ಬಂದಿ ಶೀಘ್ರವಾಗಿ ಸ್ವಾಗತ ಕಮಾನುಗಳನ್ನು ತೆರವುಗೊಳಿಸುವ ಮೂಲಕ ಯಾವುದೇ ರೀತಿಯ ಅಪಾಯವಾಗದಂತೆ ಮುನ್ನೆಚ್ಚರಿಕೆ ವಹಿಸಬೇಕಾಗಿದೆ.
– ಗೋವಿತ್ ಕಿರಣ್, ರಾಜೇಂದ್ರ ನಗರ, ಕೆಸರೆ, ಮೈಸೂರು





