ಮೈಸೂರು ನಗರದ ೫೯ನೇ ವಾರ್ಡಿನ ನೃಪತುಂಗ ರಸ್ತೆಯಲ್ಲಿ ದಿನನಿತ್ಯ ರಾತ್ರಿಯ ವೇಳೆಯಲ್ಲಿ ಕುವೆಂಪುನಗರ ಕಾಂಪ್ಲೆಕ್ಸ್ ನಿಂದ – ಕುವೆಂಪುನಗರದ ಬಸ್ ಡಿಪೋ ಮಾರ್ಗವಾಗಿ ಶ್ರೀರಾಂಪುರದ ವಾಟರ್ ಟ್ಯಾಂಕ್ ವರೆಗೂ ವಾಹನ ಚಾಲನೆ ಮಾಡಲು ಕಷ್ಟವಾಗುತ್ತಿದೆ. ಈ ರಸ್ತೆಯಲ್ಲಿ ಬಜ್ಜಿ, ಬೊಂಡ ಅಂಗಡಿಯವರು ಫುಟ್‌ಪಾತ್ ಅನ್ನು ಒತ್ತುವರಿ ಮಾಡಿಕೊಂಡಿರುವುದಲ್ಲದೇ ಕಟ್ಟೆಯನ್ನೂ ಕಟ್ಟಿಕೊಂಡಿದ್ದರೂ ನಗರಪಾಲಿಕೆ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸದೇ ನಿರ್ಲಕ್ಷ್ಯ ವಹಿಸಿದ್ದಾರೆ.
ಫುಟ್‌ಪಾತ್‌ನಲ್ಲಿ ಸಂಚಾರಕ್ಕೆ ಅವಕಾಶವಿಲ್ಲದೆ ಸಾರ್ವಜನಿಕರು ರಸ್ತೆಯ ಬದಿಯಲ್ಲಿ ಸಂಚರಿಸುತ್ತಾರೆ. ಆ ಸಮಯದಲ್ಲಿ ಅಪಘಾತವಾದರೆ ಯಾರು ಹೊಣೆ ಎನ್ನುವಂತಾಗಿದೆ. ಸಂಬಂಧಪಟ್ಟವರು ಕೂಡಲೇ ಫುಟ್‌ಪಾತ್ ಒತ್ತುವರಿ ತೆರವುಗೊಳಿಸುವ ಮೂಲಕ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ನಿವಾರಿಸಲು ಕ್ರಮ ಕೈಗೊಳ್ಳಬೇಕಾಗಿದೆ.
-ನಾಗೇಶ್, ಮಾನಸಗಂಗೋತ್ರಿ, ಮೈಸೂರು





