ಆಲನಹಳ್ಳಿ ಗ್ರಾಮದಿಂದ ಜೆ.ಎಸ್.ಎಸ್. ಆಯುರ್ವೇದ ಆಸ್ಪತ್ರೆಗೆ ತೆರಳುವ ಬದಿಯಲ್ಲಿ ಸಂಗ್ರಹಗೊಂಡಿರುವ ಕಸವನ್ನು ತೆರವುಗೊಳಿಸದೇ ಇರುವುದರಿಂದ ದುರ್ನಾತ ಬೀರುತ್ತಿದ್ದು, ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯುಂಟಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕಸದ ರಾಶಿಯನ್ನು ತೆರವುಗೊಳಿಸುವ ಮೂಲಕ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ನಿವಾರಿಸಲು ಕ್ರಮ ಕೈಗೊಳ್ಳಬೇಕಾಗಿದೆ.
-ಮಂಜುನಾಥ್, ಆಲನಹಳ್ಳಿ





