೨೦೨೫ರ ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಮೈಸೂರು ನಗರದ ಪ್ರಮುಖ ರಸ್ತೆಗಳು,ವೃತ್ತಗಳೂ ಸೇರಿದಂತೆ ಐತಿಹಾಸಿಕ, ಪಾರಂಪರಿಕ ಕಟ್ಟಡಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಇದರ ಸೊಬಗನ್ನು ವೀಕ್ಷಿಸಲು ನಮ್ಮ ರಾಜ್ಯ,ದೇಶ – ವಿದೇಶಗಳಿಂದ ಜನರು ಆಗಮಿಸುತ್ತಾರೆ. ಕುಟುಂಬದ ಜೊತೆ ಮಕ್ಕಳೂ ಬರುತ್ತಾರೆ. ಯುವಕ-ಯುವತಿಯರು ಉತ್ಸಾಹದಲ್ಲಿ ಮೈಮರೆತು ದೀಪಾಲಂಕಾರದ ತೀರ ಸನಿಹ ಹೋದರೆ ಅನಾಹುತಗಳು ಸಂಭವಿಸುವ ಸಾಧ್ಯತೆಗಳೇ ಹೆಚ್ಚು.
ಮಕ್ಕಳ ಬಗ್ಗೆಯೂ ಎಚ್ಚರ ವಹಿಸಬೇಕು. ಆದ್ದರಿಂದ ದೀಪಾಲಂಕಾರವನ್ನು ಹತ್ತಿರದಿಂದ ನೋಡಿ ಆನಂದಿಸುವುದು ಒಳಿತು. ದೀಪಾಲಂಕಾರ ಮಾಡಿರುವ ಕಂಬಗಳು, ಮರಗಳ ಬಳಿ ಮಳೆಯಿಂದಾಗಿ ವಿದ್ಯುತ್ ಪ್ರವಹಿಸುವ ಸಾಧ್ಯತೆಗಳಿರುತ್ತವೆ. ಆದ್ದರಿಂದ ಪ್ರವಾಸಿಗರು ವಿದ್ಯುತ್ ದೀಪಗಳ ವೈರ್‌ಗಳನ್ನು ಮುಟ್ಟುವುದು, ಲೈಟಿಂಗ್ಸ್‌ಗಳನ್ನು ಮುಟ್ಟುವುದು ಅಥವಾ ಬಹಳ ಹತ್ತಿರ ಹೋಗಿ ಸೆಲಿ ತೆಗೆದುಕೊಳ್ಳುವುದು ಇನ್ನಿತರ ಸಾಹಸಗಳನ್ನು ಮಾಡುವಾಗ ಜಾಗ್ರತೆವಹಿಸುವುದು ಅಗತ್ಯ.
-ನಾಗೇಶ್, ಮಾನಸ ಗಂಗೋತ್ರಿ ಮೈಸೂರು





