ದೀಪಾವಳಿ ಹಬ್ಬವನ್ನು ಸಂತೋಷದಿಂದ ಕಳೆಯಬೇಕೆಂದರೆ ಪ್ರತಿಯೊಬ್ಬರೂ ಮುಂಜಾಗ್ರತೆ ವಹಿಸಬೇಕು. ಮನೆಯಲ್ಲಿ ಪಟಾಕಿಯನ್ನು ಗಾಳಿಯಾಡುವ ಜಾಗದಲ್ಲಿ ಇಡಬೇಕು. ಪಟಾಕಿ ಹೊಡೆಯುವ ಮುನ್ನ ಹತ್ತಿ ಬಟ್ಟೆ ಧರಿಸಬೇಕು. ಬಡಾವಣೆಯ ಜನರೆಲ್ಲ ದೊಡ್ಡ ಬಯಲಿನಲ್ಲಿ ಸೇರಿ ಮುಂಜಾಗ್ರತೆಯೊಡನೆ ಪಟಾಕಿ ಹೊಡೆದರೆ ಬಡಾವಣೆಯ ಜನರ ಸಂಪರ್ಕ ಬೆಳೆದು ಸ್ನೇಹ ಪ್ರೀತಿ ವಿಶ್ವಾಸ ಬೆಳೆಯುತ್ತದೆ.
ಮಕ್ಕಳಿಗೆ ಕಡಿಮೆ ಶಬ್ದ ಸಾಮರ್ಥ್ಯವಿರುವ ಪಟಾಕಿ ಕೊಡಿಸಬೇಕು, ಅವರು ಪಟಾಕಿ, ಸುರ್‌ಸುರ್ ಬತ್ತಿ ಹಚ್ಚುವಾಗ ಪೋಷಕರು ಮುಂದೆ ನಿಂತು ಎಚ್ಚರ ವಹಿಸಬೇಕು. ಲೈಟ್ ಕಂಬ ಹತ್ತಿರ ಪಟಾಕಿ ಹೊಡೆಯಬಾರದು, ಪಟಾಕಿ ಹೊಡೆಯುವಾಗ ಹತ್ತಿರದಲ್ಲಿ ಗ್ಯಾಸ್ ಸಿಲಿಂಡರ್, ಸ್ಕೂಟರ್ ಇರದ ಹಾಗೆ ನೋಡಿಕೊಳ್ಳಬೇಕು. ಶಾಲಾ-ಕಾಲೇಜುಗಳಲ್ಲಿ ಪಟಾಕಿಯಿಂದ ಅನಾಹುತಗಳಾಗದಂತೆ ಮುಂಜಾಗ್ರತಾ ಕ್ರಮಗಳನ್ನು ವಹಿಸುವ ಬಗ್ಗೆ ತಿಳಿಸಬೇಕು. ಪರಿಸರ ಸ್ನೇಹಿ ಪಟಾಕಿಯನ್ನು ಮಾತ್ರ ಹೊಡೆಯಬೇಕು. ಆಂಬ್ಯುಲೆನ್ಸ್, ವೈದ್ಯರು ಮೊದಲಾದ ತುರ್ತು ಸೇವಾ ದೂರವಾಣಿ ಸಂಖ್ಯೆಗಳನ್ನು ಇಟ್ಟುಕೊಂಡಿರಬೇಕು.
-ಎಂ. ಎಸ್. ಉಷಾ ಪ್ರಕಾಶ್, ಎಸ್. ಬಿ.ಎಂ.ಕಾಲೋನಿ , ಮೈಸೂರು





