ರಾಜಸ್ಥಾನ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿ ೧೪ ಮಕ್ಕಳ ಸಾವಿಗೆ ಕೆಮ್ಮು ನಿವಾರಣಾ ಸಿರಪ್ ಕೋಲ್ಡ್ರಿಫ್ ಕಾರಣವೆಂದು ಆರೋಗ್ಯ ಸಚಿವಾಲಯ ಹೇಳಿರುವುದು ಪೋಷಕರಲ್ಲಿ ಆತಂಕ ಮೂಡಿಸಿದೆ. ಮಕ್ಕಳಿಗೆ ಆರೋಗ್ಯ ಸರಿ ಇಲ್ಲವೆಂದರೆ ವೈದ್ಯರ ಹತ್ತಿರ ಕರೆದುಕೊಂಡು ಹೋಗುತ್ತಾರೆ.
ವೈದ್ಯರು ಕೊಟ್ಟ ಸಲಹೆ ಚೀಟಿಯಿಂದ ಔಷಧಿಗಳನ್ನು ಖರೀದಿಸುತ್ತಾರೆ. ಆದರೆ ಔಷಧಿಯೇ ಅಡ್ಡ ಪರಿಣಾಮ ಬೀರುವ ಸ್ಥಿತಿ ನಿರ್ಮಾಣವಾದರೆ ಮಕ್ಕಳ ಆರೋಗ್ಯದ ಕುರಿತು ಯಾರ ಬಳಿ ಸಲಹೆ ಪಡೆಯಬೇಕು, ಯಾವ ಔಷಧಿ ನೀಡಬೇಕು ಎನ್ನುವಂತಾಗುತ್ತದೆ. ಔಷಧಿ ಕಂಪೆನಿಗಳು ಮಾರುಕಟ್ಟೆಗೆ ಔಷಧ ಬಿಡುಗಡೆ ಮಾಡುವ ಮುನ್ನ ಪರೀಕ್ಷೆ ನಡೆಸಬೇಕು. ಮತ್ತೊಮ್ಮೆ ಇಂತಹ ಅನಾಹುತಗಳು ಜರುಗುವ ಮುನ್ನ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಎಚ್ಚರ ವಹಿಸುವುದು ಅಗತ್ಯ.
-ಪಿ.ಸಿ.ಕಂಗಾಣಿ ಸೋಮು, ಕ್ಯಾತಮಾರನಹಳ್ಳಿ, ಮೈಸೂರು





