Mysore
28
few clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಓದುಗರ ಪತ್ರ: ಆನ್‌ಲೈನ್‌ ಬೆಟ್ಟಿಂಗ್‌ ನಿಷೇಧಿಸಿ

ಇತ್ತೀಚೆಗೆ ಆನ್‌ಲೈನ್ ವಂಚನೆಯ ಪ್ರಕರಣಗಳು ಹೆಚ್ಚಾಗುತ್ತಿವೆ. ಆನ್‌ಲೈನ್‌ ಮೂಲಕ ಹೂಡಿಕೆ ಮಾಡುವುದು, ಆನ್‌ಲೈನ್ ಬೆಟ್ಟಿಂಗ್ ಆಪ್ ಗಳು, ರಮ್ಮಿ, ತೀನ್‌ಪಟ್ಟಿಯಂತಹ ಜೂಜು ಆಟಗಳು ಜನರನ್ನು ಆಕರ್ಷಿಸುತ್ತಿದ್ದು, ಇವುಗಳನ್ನು ನಂಬಿ ಜನರು ಹಣ ಕಳೆದುಕೊಳ್ಳುತ್ತಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಆನ್‌ಲೈನ್ ಆಪ್‌ಗಳ ಮೂಲಕ ಹೂಡಿಕೆ ಮಾಡಿ ಎಂಬ ಹಾಗೂ ರಮ್ಮಿ ಆಡಿ ಹಣ ಗಳಿಸಿ ಎಂಬ ಜಾಹೀರಾತುಗಳು ಹೆಚ್ಚಾಗುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ಗುರುತಿಸಿಕೊಂಡಿರುವವರು, ಕೆಲವು ಸಿನಿಮಾ ತಾರೆಯರು ಹಾಗೂ ಕೆಲ ಕ್ರೀಡಾಪಟುಗಳು ಬೆಟ್ಟಿಂಗ್ ಆಪ್‌ಗಳನ್ನು ಪ್ರಮೋಟ್ ಮಾಡುತ್ತಿದ್ದಾರೆ.

ಇದರಿಂದಾಗಿ ಯುವ ಸಮೂಹ ಹಾದಿತಪ್ಪುತ್ತಿದ್ದು, ಸುಲಭವಾಗಿ ಹಣ ಗಳಿಸಬಹುದು ಎಂದು ಆಪ್‌ಗಳಲ್ಲಿ ಹೂಡಿಕೆ ಮಾಡುವುದು ಹಾಗೂ ಆನ್‌ಲೈನ್ ಬೆಟ್ಟಿಂಗ್ ಆಪ್‌ಗಳಲ್ಲಿ ಹಣ ಹಾಕಿ ನಷ್ಟ ಅನುಭವಿಸುತ್ತಿದ್ದಾರೆ. ಇದರಿಂದಾಗಿ ಅವರ ಕುಟುಂಬಗಳು ದಿವಾಳಿಯಾಗುತ್ತಿದ್ದು, ಅವರ ಬದುಕು ಬೀದಿಗೆ ಬಂದಿದೆ. ಕೆಲ ಆನ್‌ಲೈನ್ ಜೂಜಿನ ಆಪ್‌ಗಳು ತಮ್ಮ ಜಾಹೀರಾತಿನಲ್ಲಿ ಅವರು ಇಷ್ಟು ಹಣ ಗಳಿಸಿದ್ದಾರೆ, ಇವರು ಹಣ ಗಳಿಸಿ ಕಾರು, ಮನೆ ಖರೀದಿ ಮಾಡಿದ್ದಾರೆ ಎಂಬ ಸುಳ್ಳು ಜಾಹೀರಾತುಗಳನ್ನು ನೀಡುತ್ತಿದ್ದು, ಇವುಗಳನ್ನು ನಂಬಿ ಜನರು ಹಣ ಕಳೆದುಕೊಳ್ಳುತ್ತಿದ್ದಾರೆ. ಕೆಲವರಂತೂ ಸಾಲದ ಹೊರೆ ಹೆಚ್ಚಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಉದಾಹರಣೆಗಳೂ ಇವೆ. ಆದ್ದರಿಂದ ಸರ್ಕಾರ ಇಂತಹ ಬೆಟ್ಟಿಂಗ್ ಹಾಗೂ ಆನ್‌ಲೈನ್ ಹೂಡಿಕೆ ಆಪ್‌ಗಳನ್ನು ನಿಷೇಽಸಬೇಕು. -ನಾಗೇಶ್, ಮಾನಸಗಂಗೋತ್ರಿ, ಮೈಸೂರು

 

Tags: