Mysore
20
overcast clouds
Light
Dark

ಓದುಗರ ಪತ್ರ: ಆಟೋ ನಿಲ್ದಾಣದ ಬಳಿ ನೀರು ನಿಲ್ಲದಂತೆ ಮಾಡಿ

ಎಚ್. ಡಿ. ಕೋಟೆ ತಾಲ್ಲೂಕಿನ ಅಂತರಸಂತೆ ಗ್ರಾಮದ ಅಂಗಡಿ ಬೀದಿಯಲ್ಲಿನ ಆಟೋ ನಿಲ್ದಾಣದ ಸಮೀಪ ಮಳೆ ಬಿತ್ತು ಎಂದರೆ ನೀರು ಸಂಗ್ರಹವಾಗಿ ಕೆಸರುಮಯವಾಗುತ್ತಿದ್ದು, ಸಾರ್ವಜನಿಕರು ಆಟೋ, ಬಸ್ ಹತ್ತಲು ಪರದಾಡುವಂತಾಗಿದೆ. ಮೈಸೂರು-ಮಾನಂದವಾಡಿ ಮುಖ್ಯರಸ್ತೆಯ ಸಮೀಪದಲ್ಲೇ ಇರುವ ಈ ಆಟೋ ನಿಲ್ದಾಣದ ಬಳಿ ಸರ್ಕಾರಿ ಬಸ್‌ಗಳನ್ನೂ ನಿಲುಗಡೆ ಮಾಡುತ್ತಿದ್ದು, ಮಹಿಳೆಯರು, ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಈ ಕೆಸರಿನ ನಡುವೆಯೇ ನಿಂತು ಬಸ್ ಹತ್ತಬೇಕಿದೆ. ಅಲ್ಲದೆ ಬಸ್ ಹತ್ತುವ ಬರದಲ್ಲಿ ಕೆಲ ವಿದ್ಯಾರ್ಥಿಗಳು ಹಾಗೂ ಹಿರಿಯ ನಾಗರಿಕರು ಜಾರಿ ಬಿದ್ದಿರುವ ಉದಾಹರಣೆಗಳೂ ಇವೆ. ಈ ನಿಲ್ದಾಣದ ಸಮೀಪದಲ್ಲಿಯೇ ರಾಜಕಾಲುವೆಯೂ ಇದ್ದು, ಅದು ಕಟ್ಟಿಕೊಂಡಿದೆ. ಇನ್ನು ಇಲ್ಲಿ ಸಂಗ್ರಹವಾಗುತ್ತಿರುವ ಕೆಸರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುತ್ತಿದ್ದು, ಪ್ರಯಾಣಿಕರಿಗೆ ಹಾಗೂ ಆಟೋ ಚಾಲಕರಿಗೆ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ. ಆದ್ದರಿಂದ ಸಂಬಂಧಪಟ್ಟವರು ಆಟೋ ನಿಲ್ದಾಣದ ಬಳಿ ನೀರು ನಿಲ್ಲದಂತೆ ಮಾಡಬೇಕಿದೆ.

– ಶಂಭು ಶಾಖ್ಯ, ಅಂತರಸಂತೆ, ಎಚ್. ಡಿ. ಕೋಟೆ ತಾ.