Mysore
18
broken clouds

Social Media

ಶುಕ್ರವಾರ, 23 ಜನವರಿ 2026
Light
Dark

ಓದುಗರ ಪತ್ರ: ಮಕ್ಕಳ ಮೇಲೆ AI ದುರುಪಯೋಗ: ಪ್ರತ್ಯೇಕ ಕಾನೂನು ಅಗತ್ಯ

ಓದುಗರ ಪತ್ರ

ಭಾರತದಲ್ಲಿ ಮಕ್ಕಳ ಕುರಿತು ಅಶ್ಲೀಲ ವಿಡಿಯೋಗಳನ್ನು ಚಿತ್ರೀಕರಿಸುವುದು, ಇಂತಹ ವಿಡಿಯೋಗಳನ್ನು ಇಟ್ಟುಕೊಳ್ಳುವುದು ಅಥವಾ ಹಂಚುವುದು ಪೋಕ್ಸೋ ಕಾಯ್ದೆಯಡಿ ಅಪರಾಧ. ಈ ಕಾಯಿದೆ ಮಕ್ಕಳ ರಕ್ಷಣೆಗೆ ಸಹಾಯಕ.

ಆದರೆ ಹೊಸ ತಂತ್ರಜ್ಞಾನ ಅದರಲ್ಲೂ ಎಐಯಿಂದ ಸೃಷ್ಟಿಯಾದ ಡೀಪ್ಛೇಕ್ ಚಿತ್ರಗಳು, ನಕಲಿ ವಿಡಿಯೋಗಳು ಮತ್ತು ಇತರ ಕೃತಕ ಚಿತ್ರಗಳ ಬಗ್ಗೆ ನೇರವಾಗಿ ನಿಯಂತ್ರಣ ಮಾಡುವ ಪ್ರತ್ಯೇಕ ಕಾನೂನು ಭಾರತದಲ್ಲಿ ಇನ್ನೂ ಬಂದಿಲ್ಲ. ಇದು ಪೋಷಕರಲ್ಲಿ ಆತಂಕ ಮೂಡಿಸಿದೆ. ಮಕ್ಕಳನ್ನು ತೋರಿಸುವ ನಕಲಿ ದೌರ್ಜನ್ಯ ವಿಡಿಯೋಗಳನ್ನು ನಿರ್ಮಿಸುವುದು ಇನ್ನೂ ಗಂಭೀರ ಅಪಾಯ. ಎಐ ಮೂಲ ಚಿತ್ರವನ್ನು ಬದಲಿಸಿ, ನಕಲಿ ದೃಶ್ಯಗಳನ್ನು ಸೇರಿಸುವುದಕ್ಕೆ ತುಂಬಾ ಸುಲಭ.

ಇದರಿಂದ ನೈತಿಕ ಸಮಸ್ಯೆಗಳು, ಕಾನೂನು ಪ್ರಶ್ನೆಗಳು ಉದ್ಭವಿಸುತ್ತಿವೆ. ಈ ಕಾರಣಕ್ಕೆ ಎಐ ದುರುಪಯೋಗವೂ ಹೆಚ್ಚಿದೆ. ೨೦೨೫ರಲ್ಲಿ ಸರ್ಕಾರ ಈ ಕುರಿತು ನೂತನ ಕಾನೂನು ತರಲು ಯೋಚಿಸಿದ್ದರೂ ಇಲ್ಲಿಯವರೆಗೆ ಕಾರ್ಯರೂಪಕ್ಕೆ ಬಂದಿಲ್ಲ. ಸರ್ಕಾರ ಈಗಲಾದರೂ ಮಕ್ಕಳ ಮೇಲೆ ಎಐ ದುರುಪಯೋಗ ತಡೆಗೆ ಪ್ರತ್ಯೇಕ ಕಾನೂನು ರಚಿಸುವುದು ಅಗತ್ಯವಾಗಿದೆ.

-ಡಾ.ಎಚ್.ಕೆ.ವಿಜಯಕುಮಾರ್, ಬೆಂಗಳೂರು

Tags:
error: Content is protected !!