ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ದಸರಾ ಉದ್ಘಾಟನೆಗೆ ಅಂತಾರಾಷ್ಟ್ರೀಯ ಬುಕರ್ ಪ್ರಶಸ್ತಿ ಪುರಸ್ಕೃತ ಸಾಹಿತಿ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿರುವ ವಿಚಾರವಾಗಿ ರಾಜ್ಯ ಸರ್ಕಾರದ ನಡೆಯನ್ನು ವಿರೋಧಿಸಿದ್ದರು.
ದಲಿತ ಮಹಿಳೆಯರಿಗೂ ಕೂಡ ಚಾಮುಂಡೇಶ್ವರಿ ತಾಯಿಗೆ ಹೂವು ಹಾಕಲು ಅರ್ಹತೆ ಇಲ್ಲ ಎಂದು ಹೇಳಿ ದಲಿತರನ್ನು ಅವಮಾನಿಸಿದ್ದರು. ಒಬ್ಬ ಜನಪ್ರತಿನಿಧಿ ಪ್ರಜಾತಂತ್ರ ವ್ಯವಸ್ಥೆಯ ಸಂವಿಧಾನದ ಅಡಿಯಲ್ಲಿ ಎಲ್ಲಾ ಜಾತಿ ಧರ್ಮಗಳನ್ನು ಸಮಾನವಾಗಿ ಕಾಣಬೇಕಾಗಿರುವುದು ಅವರ ಕರ್ತವ್ಯ ಅದನ್ನು ಮರೆತು ದಲಿತರನ್ನು ಅಪಮಾನಿಸಿರುವ ಯತ್ನಾಳ್ ಅವರ ವಿರುದ್ಧ ಸೂಕ್ತ ಕ್ರಮ ಜರುಗಿಸುವುದು ಅಗತ್ಯ.
– ಪಿ .ಸಿ.ಕಂಗಾಣಿಸೋಮು, ಕ್ಯಾತಮಾರನಹಳ್ಳಿ, ಮೈಸೂರು





