ಮಂಡ್ಯ (Mandya) ನಗರದ ಪಿಇಎಸ್(PES) ಕಾನೂನು ಕಾಲೇಜಿನ ರಸ್ತೆಯ ಸಮೀಪ ಇರುವ ಮನೆಗಳಿಗೆ ಮಂಡ್ಯ ನಗರಸಭೆಯಿಂದ ಶುದ್ಧ ಕುಡಿಯುವ ನೀರು (Drinking Water) ಸರಬರಾಜು ಮಾಡದೇ ಇರುವುದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ.
ನೀರು ಶುದ್ಧೀಕರಣಕ್ಕೆ ಅತಿಯಾಗಿ ರಾಸಾಯನಿಕಗಳನ್ನು ಬಳಸುವುದರಿಂದ ಬಿಳಿ ಬಣ್ಣದ ನೀರು ಸರಬರಾಜಾಗುತ್ತದೆ.
ಕೆಲವೊಮ್ಮೆ ನೀರನ್ನು ಶುದ್ಧೀಕರಿಸದೇ ಹಾಗೆಯೇ ಸರಬರಾಜು ಮಾಡುವುದರಿಂದ ಆ ನೀರು ಕೂಡ ಕುಡಿಯಲು ಯೋಗ್ಯವಾಗಿರುವುದಿಲ್ಲ.
ಇದನ್ನೂ ಓದಿ:- ಓದುಗರ ಪತ್ರ: ಸರ್ಕಾರವೇ ಪ್ಲಾಸ್ಟಿಕ್ ಉತ್ಪಾದನೆ ನಿಷೇಧಿಸಲಿ
ಈ ಬಗ್ಗೆ ನೀರುಗಂಟಿಗಳನ್ನು ಕೇಳಿದರೆ ನೀವು ನೀರನ್ನು ಒಂದು ಗಂಟೆ ನಲ್ಲಿಯಿಂದ ಹರಿಯಲು ಬಿಡಿ, ಆನಂತರ ಬಳಸಿ ಎಂದು ಸಲಹೆ ನೀಡುತ್ತಾರೆ. ಈ ರೀತಿ ಗಂಟೆಗಟ್ಟಲೇ ನೀರು ಪೋಲು ಮಾಡುವ ಬದಲು ನಗರಸಭೆಯವರು ನೀರು ಶುದ್ಧೀಕರಣಕ್ಕೆ ಅಗತ್ಯವಿರುವಷ್ಟೇ ರಾಸಾಯನಿಕಗಳನ್ನು ಬಳಸಿದರೆ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ.
-ಎಸ್.ಪದ್ಮಾವತಿ, ಮಂಡ್ಯ





