ವಿಮಾ ವಲಯದಲ್ಲಿ ಶೇ. ೧೦೦ ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆ(ಎ-ಡಿಐ)ಯಿಂದ ವಿಮಾ ರಕ್ಷಣೆ ಪಡೆದ ಜೀವಗಳ ಮತ್ತು ಆಸ್ತಿಗಳ ಸಂಖ್ಯೆ ಹೆಚ್ಚಾದಂತೆ ಪ್ರತಿಯೊಂದು ಪಾಲಿಸಿಯ ವೆಚ್ಚಗಳೂ ಕಡಿಮೆಯಾಗುತ್ತವೆ ಎಂದು ‘ಆಂದೋಲನ’ ದಿನಪತ್ರಿಕೆ(೧೬-೧೨-೨೦೨೫) ಯಲ್ಲಿ ಪ್ರೊ. ಆರ್.ಎಂ.ಚಿಂತಾಮಣಿಯವರ ಲೇಖನದಲ್ಲಿ ಪ್ರಕಟವಾಗಿದೆ. ಈಗಿನ ಎನ್‌ಡಿಎ ನೇತೃತ್ವದ ಕೇಂದ್ರ ಸರ್ಕಾರದ ನೀತಿಗಳು ಸಂಪತ್ತಿನ ವಿಕೇಂದ್ರೀಕರಣ ಆಗದಿರಲು ಕ್ರಮ ಕೈಗೊಳ್ಳುತ್ತಿವೆ. ಕ್ಲೇಷೆ ಎನಿಸಿದರೂ ಶ್ರೀಮಂತರು ಅತಿ ಶ್ರೀಮಂತರಾಗುತ್ತಿದ್ದಾರೆ. ಬಡವರು ಕಡು ಬಡವರಾಗುತ್ತಿದ್ದಾರೆ.
ಈ ಸಮಯದಲ್ಲಿ ವಿಮಾರಂಗದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್ಡಿಐ)ಯನ್ನು ಶೇ,೧೦೦ಕ್ಕೆ ಏರಿಸುವ ಕೇಂದ್ರ ಸರ್ಕಾರದ ನಿರ್ಧಾರ ಸಂಪೂರ್ಣ ಜನವಿರೋಧಿಯಾಗಿದೆ.
– ಲ.ಜಗನ್ನಾಥ್, ಮೈಸೂರು





