Mysore
22
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಡಿಸೆಂಬರ್‌ 10ರಂದು ಮೈಸೂರಿನ ಈ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ

ಮೈಸೂರು: ಬನ್ನಿಮಂಟಪದ ವಿದ್ಯುತ್ ಸ್ವೀಕರಣಾ ಕೇಂದ್ರ ಮತ್ತು ವಾಜಮಂಗಲ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಡಿ. 10ರಂದು ಬೆಳಿಗ್ಗೆ 10ರಿಂದ ಸಂಜೆ 5.30ರವರೆಗೆ ಸೆಸ್ಕ್ ವತಿಯಿಂದ 3ನೇ ತ್ರೈಮಾಸಿಕ ಅವಧಿಯ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ವಿದ್ಯುತ್ ವ್ಯತ್ಯಯ ಪ್ರದೇಶಗಳು: ಕೆಸರೆ 1ನೇ ಹಂತ, 2ನೇ ಹಂತ, ಸುಭಾಷ್‌ನಗರ, ಶೋಭಾ ಗಾರ್ಡನ್, ಆರ್. ಎಸ್ ನಾಯ್ಡುನಗರ, ಎನ್. ಆರ್. ಗಾರ್ಡನ್, ಬೆಲವತ್ತ, ಶ್ಯಾದನಹಳ್ಳಿ, ನಾಗನಹಳ್ಳಿ ಹೊಸ ಬಡಾವಣೆ, ಕೆ. ಆರ್. ಮಿಲ್ ಕಾಲೋನಿ, ವರುಣ ನಾಲೆ, ಸಿದ್ದಲಿಂಗಪುರ, ಕಳಸ್ತವಾಡಿ, ಲಕ್ಷ್ಮೀಪುರಂ, ಎಸ್. ಎಸ್. ನಗರ, ಕಾವೇರಿ ನಗರ, ಸಿದ್ದಿಖಿನಗರ, ಹನುಮಂತ ನಗರ, ಮದರ್ ಬಾಕ್ಸ್ ಹೈವೇ ವೃತ್ತ, ಕೆಎಸ್‌ಆರ್ ಟಿಸಿ ಡಿಪೋ, ಹಲೀಮ್ ನಗರ, ಬವೀ ಭವನ, ಜೆಎಸ್‌ಎಸ್ ದಂತ ವೈದ್ಯಕೀಯ ಕಾಲೇಜು, ಸೇಂಟ್ ಜೋಸೆಫ್ ಆಸ್ಪತ್ರೆ ಸುತ್ತಮುತ್ತ.

ವಾಜಮಂಗಲ ವಿದ್ಯುತ್ ವಿತರಣಾ ಕೇಂದ್ರ: ಈ ವ್ಯಾಪ್ತಿಯ ಪ್ರದೇಶಗಳಾದ ಮೆಲ್ಲಹಳ್ಳಿ, ಹಾರೋಹಳ್ಳಿ, ಹಳ್ಳಿಕೇರಿಹುಂಡಿ, ಶಿವಪುರ, ಪಿಲ್ಲಹಳ್ಳಿ, ವರಕೋಡು, ಬಡಗಲಹುಂಡಿ, ಮೂಡಲ ಹುಂಡಿ, ಕೆಂಪೆಗೌಡನಹುಂಡಿ, ವರುಣ, ದಂಡಿಕೆರೆ, ವಾಜಮಂಗಲ, ಮೊಸಂಬಾಯನಹಳ್ಳಿ, ಯಾಂದಳ್ಳಿ, ಸಜ್ಜೆಹುಂಡಿ, ಜಂತಗಳ್ಳಿ, ಮಹದೇಶ್ವರ ಬಡಾವಣೆ, ಇಂಡಸ್ ಬಡಾವಣೆ, ಭುಗತಗಳ್ಳಿ ಗೇಟ್, ಚಿಕ್ಕಹಳ್ಳಿ, ಚೋರನಹಳ್ಳಿ, ನಾಡನಹಳ್ಳಿ, ಪೊಲೀಸ್ ಬಡಾವಣೆ, ಲಾಲ್ ಬಹದ್ದೂರು ಶಾಸ್ತ್ರಿ ನಗರ, ಶೋಭ ಡೆವಲಪರ್ಸ್, ಯಶಸ್ವಿನಿ ಹಿಲ್ ವ್ಯೂ, ವಸಂತನಗರ, ಸುಕದಾಯಿ ಬಡಾವಣೆ, ಶಾಂತವೇರಿ ಗೋಪಾಲಗೌಡ ನಗರ, ಪ್ರಕೃತಿ ಬಡಾವಣೆಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ಸೆಸ್ಕ್ ಎನ್. ಆರ್. ಮೊಹಲ್ಲಾ ವಿಭಾಗದ ಕಾರ್ಯ ಮತ್ತು ಪಾಲನೆಯ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.

 

Tags: