ಮಂಡ್ಯ: 66/11 ಕೆ.ವಿ. ತೂಬಿನಕೆರೆ ಮತ್ತು ತುಂಬಕೆರೆ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಡಿ. 11ರಂದು ವಿದ್ಯುತ್ ತ್ರೈಮಾಸಿಕ ನಿರ್ವಹಣಾ ಕಾರ್ಯ ಹಮ್ಮಿಕೊಳ್ಳಲಾಗಿದ್ದು, ಬೆಳಿಗ್ಗೆ 9ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ನಗರ ಪ್ರದೇಶಗಳಾದ ಗುತ್ತಲು, ಫ್ಯಾಕ್ಟರಿ ವೃತ್ತ, ಕೈಗಾರಿಕಾ ಬಡಾವಣೆಗಳು, ಎಂ. ಸಿ. ರಸ್ತೆ, ತಾವರೆಗೆರೆ, ನೆಹರು ನಗರ, ಉದಯಗಿರಿ, ಸಾದತ್ ಮೊಹಲ್ಲ, ಚನ್ನಯ್ಯ ಬಡಾವಣೆ, ಸಿದ್ಧಾರ್ಥ ಬಡಾವಣೆ, ಬೆಂಗಳೂರು ಮುಖ್ಯ ರಸ್ತೆಯ ಹೆಬ್ಬಾಳ ಹಾಗೂ ಗ್ರಾಮಾಂತರ ಪ್ರದೇಶಗಳಾದ ಶ್ರೀನಿವಾಸಪುರ ಗೇಟ್, ಹನಕೆರೆ ಐ. ಪಿ ವ್ಯಾಪ್ತಿ, ಕೀಲಾರ ಐ. ಪಿ ವ್ಯಾಪ್ತಿ, ಬಸವನಪುರ ಐ. ಪಿ. ವ್ಯಾಪ್ತಿ, ಬೂದನೂರು, ಭೂತನ ಹೊಸೂರು, ಚನ್ನಪ್ಪನ ದೊಡ್ಡಿ, ಅಂಬರಹಳ್ಳಿ, ತುಂಬಕೆರೆ ವಿದ್ಯುತ್ ವಿತರಣಾ ಕೇಂದ್ರದ ಗ್ರಾಮಾಂತರ ಪ್ರದೇಶ: ಹೊಡಾಘಟ್ಟ, ಕೀಲಾರ, ಹನಕೆರೆ, ಹಳೇ ಬೂದನೂರು, ಹೊಸಬೂದನೂರು, ಈಚಗೆರೆ, ಅಂಬರಹಳ್ಳಿ, ಆಲಕೆರೆ, ನಲ್ಲಹಳ್ಳಿ, ಕಚ್ಚಿಗೆರೆ, ಶ್ರೀನಿವಾಸ ಪುರ ಗೇಟ್, ಹೊನಗಾನಹಳ್ಳಿಮಠ, ತುಂಬಕೆರೆ, ಚಾಮಲಾಪುರ, ಉಮ್ಮಡಹಳ್ಳಿ ಸುತ್ತಮುತ್ತ ವ್ಯತ್ಯಯವಾಗಲಿದೆ.