ಕೊಳ್ಳೇಗಾಲ: ಸೆ. 14ರಂದು 66/11 ಕೆ. ವಿ. ಕುಂತೂರು ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ಕಾರ್ಯನಿರ್ವಹಣೆ ಹಮ್ಮಿಕೊಂಡಿರುವುದರಿಂದ ಇದರ ವ್ಯಾಪ್ತಿಗೆ ಬರುವ ಚಿಲಕವಾಡಿ, ಟಗರಪುರ, ಕುಂತೂರು, ಮೆಲ್ಲಹಳ್ಳಿಮೋಳೆ, ಆಲಹಳ್ಳಿ, ಯಡಮೋಳೆ, ಕುಂತೂರು ಮೋಳೆ, ಹೊಸಮಾಲಂಗಿ, ಕಜ್ಜೀಹುಂಡಿ, ಸಿಲ್ಕಲ್‌ಪುರ ಸುತ್ತಮುತ್ತ ಗ್ರಾಮಗಳಲ್ಲಿ ಬೆಳಿಗ್ಗೆ 10ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ಸೆಸ್ಕ್ ಎಇಇ ತಿಳಿಸಿದ್ದಾರೆ.