Mysore
21
broken clouds

Social Media

ಬುಧವಾರ, 13 ನವೆಂಬರ್ 2024
Light
Dark

ಪಾಂಡವಪುರ ತಾಲ್ಲೂಕು ಪೈಲೆಟ್‌ ಪ್ರಾಜೆಕ್ಟ್‌ಗೆ ಆಯ್ಕೆ

ಕಂದಾಯ ದಾಖಲೆಗಳ ಗಣಕೀಕರಣ ತಂತ್ರಾಂಶದಲ್ಲಿ ಅಭಿಲೇಖಾಲಯದ ದಾಖಲೆಗಳು ಸ್ಕ್ಯಾನಿಂಗ್
ಬಿ. ಟಿ. ಮೋಹನ್ ಕುಮಾರ್
ಮಂಡ್ಯ: ಕಂದಾಯ ದಾಖಲೆಗಳ ಗಣಕೀಕರಣ ತಂತ್ರಾಂಶದಲ್ಲಿ ಅಭಿಲೇಖಾಲಯದ ಎಲ್ಲ ದಾಖಲೆಗಳನ್ನು ಸ್ಕ್ಯಾನಿಂಗ್ ಮಾಡಿ ಗಣಕೀಕರಣದ ಮೂಲಕ ಸಂಗ್ರಹಿಸುವ ಕಾರ್ಯಕ್ರಮಕ್ಕೆ ಪಾಂಡವಪುರ ತಾಲ್ಲೂಕು ಪೈಲೆಟ್ ಪ್ರಾಜೆಕ್ಟ್ ಆಗಿ ಆಯ್ಕೆಯಾಗಿದ್ದು, ಈಗಾಗಲೇ ದಾಖಲೆಗಳ ಗಣಕೀಕರಣ ಪ್ರಕ್ರಿಯೆಯು ತ್ವರಿತಗತಿಯಲ್ಲಿ ಸಾಗುತ್ತಿದೆ.

ಕಡತಗಳು/ವಹಿಗಳನ್ನು ವಿಲೇವಾರಿ ವರ್ಗೀಕರಣದ ಆಧಾರದ ಮೇಲೆ ಅಂದರೆ ಎ, ಬಿ, ಸಿ, ಡಿ ಮತ್ತು ಇ ಆಧಾರದ ಮೇಲೆ ಕಂದಾಯ ದಾಖಲೆಗಳ ಗಣಕೀಕರಣ ಕಾರ್ಯ ನಿರ್ವಹಿಸಲು ರಾಜ್ಯ ಸರ್ಕಾರ ಆದೇಶಿಸಿದೆ. ವಿಷಯ ನಿರ್ವಾಹಕರು ಅಭಿಲೇಖಾಲಯ ದಲ್ಲಿರುವ ಕಡತಗಳ ವರ್ಗವಾರು (ಎ, ಬಿ, ಸಿ, ಡಿ ಮತ್ತು ಇ) ವಿವರಗಳನ್ನು ತಂತ್ರಾಂಶದಲ್ಲಿ ದಾಖಲಿಸುತ್ತಿದ್ದಾರೆ.

‘ಎ’ ವರ್ಗದ ಕಡತ/ವಹಿಗಳನ್ನು ಪ್ರಥಮ ಆದ್ಯತೆ ಮೇಲೆ ಪರಿಗಣಿಸಬೇಕು. ನಂತರದಲ್ಲಿ ಬಿ, ಸಿ, ಡಿ ಮತ್ತು ಇ ವರ್ಗದ ಕಡತ/ವಹಿಗಳನ್ನು ನಿರ್ವಹಿಸಕ್ಕದ್ದು ಎಂದು ಕಂದಾಯ ಆಯುಕ್ತಾಲ ಯದ ಆಯುಕ್ತರು ಎಲ್ಲ ತಹಸಿಲ್ದಾರರಿಗೆ ನಿರ್ದೇಶನ ನೀಡಿದ್ದಾರೆ. ಕಂದಾಯ ಇಲಾಖೆಗಳ ಗಣಕೀಕರಣ ತಂತ್ರಾಂಶದಲ್ಲಿ ಈಗಾಗಲೇ ವಿಷಯ ನಿರ್ವಾಹಕ/ಶಿರಸ್ತೇದಾರ/ತಹಸಿ ಲ್ದಾರ್/ಸಹಾಯಕ ಆಯುಕ್ತರ ಮೊಬೈಲ್ ಸಂಖ್ಯೆಗಳನ್ನು ಲಿಂಕ್ ಮಾಡಬೇಕು ಎಂದು ಸೂಚಿಸಿದ್ದಾರೆ. ಅಭಿಲೇಖಾಲಯದ ಎಲ್ಲ ದಾಖಲೆಗಳನ್ನು ೧೦೦ ದಿನಗಳ ಕಾಲಮಿತಿಯೊಳಗೆ ಸಂಪೂರ್ಣವಾಗಿ ಗಣಕೀಕರಣಗೊಳಿಸಲು ರಾಜ್ಯದ ಪ್ರತಿ ಜಿಲ್ಲೆಯಿಂದ ಎರಡು ತಾಲ್ಲೂಕು ಕಚೇರಿಗಳನ್ನು ಆಯ್ಕೆ ಮಾಡಿ ಪ್ರಸ್ತಾವನೆ ಸಲ್ಲಿಸು ವಂತೆ ಕಂದಾಯ ಆಯುಕ್ತರು ನಿರ್ದೇಶನ ನೀಡಿದ್ದರು. ಹೀಗಾಗಿ ಪ್ರಥಮ ಹಂತದಲ್ಲಿ ಮಂಡ್ಯ ಜಿಲ್ಲೆಯಲ್ಲಿ ಪಾಂಡವಪುರ ತಾಲ್ಲೂಕು ಕಚೇರಿಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

‘ಎ’ ವರ್ಗದ ದಾಖಲೆಗಳನ್ನು ಶಾಶ್ವತವಾಗಿ ಸಂಗ್ರಹಿಸಬೇಕಿದೆ. ‘ಬಿ’ ವರ್ಗದ ದಾಖಲೆಗಳನ್ನು ೩೦ ವರ್ಷಗಳು, ‘ಸಿ’ವರ್ಗದ ದಾಖಲೆಗಳನ್ನು ೧೦ ವರ್ಷಗಳು ಹಾಗೂ ‘ಡಿ’ ವರ್ಗದ ದಾಖಲೆಗಳನ್ನು ೫ ವರ್ಷಗಳ ಕಾಲ ಸಂಗ್ರಹಿಸಬೇಕಿದೆ. ನಿರ್ದಿಷ್ಟ ತಂತ್ರಾಂಶದಲ್ಲಿ ಇವುಗಳನ್ನು ದಾಖಲಿಸಿಕೊಂಡು, ಎಲ್ಲ ಗಣಕೀಕರಣ ಕಾರ್ಯ ಅಂತಿಮಗೊಂಡ ಸರ್ಕಾ ರದಿಂದ ಅನುಮೋದನೆ ಸಿಕ್ಕ ಬಳಿಕ ಪಬ್ಲಿಕ್ ಡೊಮೈನ್‌ಗೆ ಅಪ್‌ಲೋಡ್ ಮಾಡಿ, ಆರ್‌ಟಿಸಿ ಮಾದರಿಯಲ್ಲಿ ಸಾರ್ವಜನಿಕರಿಗೆ ದಾಖಲೆಗಳನ್ನು ವಿತರಿಸಲಾಗುತ್ತದೆ.

ಎಲ್ಲ ದಾಖಲೆಗಳನ್ನು ಇಂಡೆಕ್ಸಿಂಗ್, ಕ್ಯಾಟಲಾಗಿಂಗ್, ಸ್ಕ್ಯಾನ್ ಮತ್ತು ದಾಖಲೆಗಳನ್ನು ಅಪ್‌ಲೋಡ್ ಮಾಡುವ ಕಾರ್ಯವಿಧಾನಗಳಿಗೆ ಸಂಬಂಽಸಿದಂತೆ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ. ಅದರಂತೆ ಆಕ್ಟಿವಿಟಿ-೧ರಲ್ಲಿ ಇಂಡೆಕ್ಸಿಂಗ್ ಮತ್ತು ಕ್ಯಾಟಲಾಗಿಂಗ್ ಮಾಡಲಾಗುತ್ತಿದೆ. ಆಕ್ಟಿವಿಟಿ-೨ರಲ್ಲಿ ಸ್ಕ್ಯ್ಯಾನಿಂಗ್, ಆಕ್ಟಿವಿಟಿ-೩ರಲ್ಲಿ ಗ್ರೂಪಿಂಗ್ ಮತ್ತು ಕೀವರ್ಡ್ ಟ್ಯಾಗ್, ಆಕ್ಟಿವಿಟಿ-೪ರಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ. ಎಲ್ಲ ದಾಖಲೆಗಳು ಜೆಪಿಇಜಿ ಫಾರ್ಮೆಟ್ ನಲ್ಲಿ ಸ್ಕ್ಯಾನ್ ಆಗುವುದರಿಂದ ಸುಲಭವಾಗಿ ದಾಖಲೆಗಳು ಸಿಗಲಿವೆ. ಪ್ರತಿ ಕಡತದಲ್ಲಿ ಪುಟ ಸಂಖ್ಯೆ ಕಡ್ಡಾಯವಾಗಿ ಇರುವಂತೆ ನೋಡಿಕೊಳ್ಳಲಾಗುತ್ತಿದೆ. ಒಂದೊಮ್ಮೆ ಪುಟ ಸಂಖ್ಯೆ ಇರದಿದ್ದಲ್ಲಿ ಪುಟ ಸಂಖ್ಯೆಯನ್ನು (ಕೆಳಗಿನಿಂದ ಮೇಲೆ) ನಮೂದಿಸಲಾಗುತ್ತಿದೆ.

ಪಾಂಡವಪುರ ತಾಲ್ಲೂಕಿನಲ್ಲಿ ಒಟ್ಟು ೧,೨೩,೩೩೯ ಕಡತಗಳು ಹಾಗೂ ೧೧,೬೦೧ ರಿಜಿಸ್ಟರ್‌ಗಳನ್ನು (ವಹಿಗಳು) ‘ಕಂದಾಯ ದಾಖಲೆಗಳ ಗಣಕೀಕರಣ’ಕ್ಕೆ ಪರಿಗಣಿಸಲಾಗಿದೆ. ಈ ಪೈಕಿ ಶಾಶ್ವತವಾಗಿ ಸಂಗ್ರಹಿಸಬೇಕಾದ ೯೮,೮೭೯ ಕಡತಗಳು ಹಾಗೂ ೭,೭೫೧ ರಿಜಿಸ್ಟರ್‌ಗಳನ್ನು ‘ಎ’ ವರ್ಗದಲ್ಲಿ ಸ್ಕ್ಯಾನಿಂಗ್ ಮಾಡಿ ಸಂಗ್ರಹಿಸಲು ನಿರ್ಧರಿಸಲಾಗಿದೆ. ಕಡತಗಳ ವಿಚಾರಕ್ಕೆ ಬಂದರೆ ‘ಬಿ’ ವರ್ಗದಲ್ಲಿ ೭೪,೯೮೯, ‘ಸಿ’ ವರ್ಗದಲ್ಲಿ ೫೭,೮೬೮, ‘ಡಿ’ ವರ್ಗದಲ್ಲಿ ೪೧,೫೮೧ ಕಡತಗಳನ್ನು ಗಣಕೀಕರಣಗೊಳಿಸಲು ಪಟ್ಟಿ ಮಾಡಲಾಗಿದೆ. ಈ ಪೈಕಿ ಈವರೆಗೆ ‘ಎ’ ವರ್ಗದಲ್ಲಿ ೧೯,೯೨೫, ‘ಬಿ’ ವರ್ಗದಲ್ಲಿ ೮೧ ಕಡತಗಳನ್ನು ಸ್ಕ್ಯಾನಿಂಗ್ ಮಾಡಿ ನಿರ್ದಿಷ್ಟ ತಂತ್ರಾಂಶಕ್ಕೆ ಅಪ್‌ಲೋಡ್ ಮಾಡಲಾಗಿದೆ. ರಿಜಿಸ್ಟರ್/ವಹಿಗಳ ವಿಚಾರವಾಗಿ ಹೇಳುವುದಾದರೆ ‘ಎ’ ವರ್ಗದಲ್ಲಿ ೭೭೫೧, ‘ಬಿ’ ವರ್ಗದಲ್ಲಿ ೨,೫೫೦, ‘ಸಿ’ ವರ್ಗದಲ್ಲಿ ೮೭೦, ‘ಡಿ’ ವರ್ಗದಲ್ಲಿ ೪೩೦ ರಿಜಿಸ್ಟರ್‌ಗಳನ್ನು ಗಣಕೀಕರಣ ಮಾಡಲು ಗುರುತಿಸಲಾಗಿವೆ. ಇವುಗಳಲ್ಲಿ ಪ್ರಸ್ತುತ ‘ಎ’ ವರ್ಗದಲ್ಲಿ ೨,೨೯೩ ರಿಜಿಸ್ಟರ್‌ಗಳನ್ನು ಅಪ್ಲೋಡ್ ಮಾಡಲಾಗಿದೆ.

ಸರ್ಕಾರದ ಆದೇಶದಂತೆ ಪಾಂಡವಪುರ ತಾಲ್ಲೂಕು ಕಚೇರಿಯನ್ನು ಮಂಡ್ಯ ಜಿಲ್ಲೆಯಲ್ಲಿ ಪೈಲೆಟ್ ಪ್ರಾಜೆಕ್ಟ್‌ಗೆ ಆಯ್ಕೆ ಮಾಡಿಕೊಂಡು, ಕಂದಾಯ ದಾಖಲೆಗಳ ಗಣಕೀಕರಣ ಮಾಡಲಾಗುತ್ತಿದೆ. ಪ್ರಸ್ತುತ ಸ್ಕ್ಯಾನಿಂಗ್ ಆದ ದಾಖಲೆಗಳನ್ನು ನಿಽಷ್ಟ ತಂತ್ರಾಂಶದಲ್ಲಿ ಅಪ್‌ಲೋಡ್ ಮಾಡಿ ಸಂಗ್ರಹಿಸಿಟ್ಟುಕೊಳ್ಳಲಾಗುತ್ತಿದೆ. ಎಲ್ಲವೂ ಅಂತಿಮಗೊಂಡ ಬಳಿಕ ಸರ್ಕಾರದ ಆದೇಶದಂತೆ ಭೂಮಿ ಸಾಫ್ಟ್‌ವೇರ್‌ಗೆ ಅಪ್‌ಲೋಡ್ ಮಾಡಿ ಆರ್‌ಟಿಸಿ ಮಾದರಿಯಲ್ಲಿ ಜನರಿಗೆ ಗಣಕೀಕೃತ ದಾಖಲೆಗಳನ್ನು ನೀಡಲಾಗುವುದು. – ಡಾ. ಎಚ್. ಎಲ್. ನಾಗರಾಜು, ಅಪರ ಜಿಲ್ಲಾಧಿಕಾರಿ, ಮಂಡ್ಯ

 

Tags: