ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುರ್ಚಿಯನ್ನೇ ಅಲುಗಾಡಿಸುತ್ತಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ ನಿವೇಶನ ಅಕ್ರಮ ಹಂಚಿಕೆ ಪ್ರಕರಣದಲ್ಲಿ ಮತ್ತೊಂದು ಕರ್ಮಕಾಂಡ ಬಯಲಾಗಿದೆ. ವಿಜಯನಗರದ ಮಧ್ಯಭಾಗದಲ್ಲಿರುವ ಕೋಟ್ಯಂತರ ರೂ. ಬೆಲೆ ಬಾಳುವ ೨೬ ನಿವೇಶನ ಗಳನ್ನು ಕೇವಲ ೩ರಿಂದ ೬ ಸಾವಿರ ರೂ. ಗಳಿಗೆ ಮಾರಾಟ ಮಾಡಿರುವುದನ್ನು ಜಾರಿ ನಿರ್ದೇಶನಾಲಯ (ಇಡಿ) ಪತ್ತೆಹಚ್ಚಿದೆ.
ಈ ಹಿಂದೆ ಮೈಸೂರಿನಲ್ಲಿ ಮುಡಾ ಆಯುಕ್ತ ರಾಗಿದ್ದ ಜಿ. ಟಿ. ದಿನೇಶ್‌ಕುಮಾರ್ ಅವರು ಸ್ಥಳೀಯ ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಎಂಬವರ ಜೊತೆ ಸೇರಿ ಪ್ರೋತ್ಸಾಹದಾಯಕ ಯೋಜನೆ ಹೆಸರಿನಲ್ಲಿ ಕೇವಲ ೩ ಸಾವಿರ ರೂ. ಸೇವಾ ಶುಲ್ಕ ಪಡೆದು ಕೋಟ್ಯಂತರ ರೂ.ಬೆಲೆಬಾಳುವ ೨೬ ನಿವೇಶನಗಳನ್ನು ಮಂಜೂರು ಮಾಡಿದ್ದು, ದಿನೇಶ್ ಕುಮಾರ್, ಉದ್ಯಮಿ ಮಂಜುನಾಥ್ ಇವರನ್ನೊಳಗೊಂಡ ವಿವಿಧ ಪ್ರಕರಣಗಳಲ್ಲಿ ಮುಡಾಗೆ ೩೦೦ ಕೋಟಿ ರೂ. ನಷ್ಟ ಉಂಟಾಗಿರುವ ಬಗ್ಗೆ ಇಡಿ ಮಾಹಿತಿ ನೀಡಿದೆ.
ಪ್ರೋತ್ಸಾಹದಾಯಕ ಯೋಜನೆಯಡಿ ಈ ೨೬ ನಿವೇಶನಗಳನ್ನು ಕೇವಲ ೪ ದಿನಗಳಲ್ಲಿ ಮಂಜೂರು ಮಾಡಿರುವುದು ಭಾರೀ ಸಂಶಯಕ್ಕೆ ಎಡೆ ಮಾಡಿ ಕೊಟ್ಟಿದೆ. ಮೈಸೂರಿನ ಕಾರ್ತಿಕ ಬಡಾವಣೆಯ ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಎಂಬವರು ಈ ನಿವೇಶನಗಳನ್ನು ಖರೀದಿಸಿದ್ದಾರೆ. ಮತ್ತೊಂದು ವಿಶೇಷವೆಂದರೆ ೫ ಲಕ್ಷ ರೂ. ಶುಲ್ಕ ಪಾವತಿಸಬೇಕಾದ ಕಡೆ ಕೇವಲ ೬೦೦ ರೂ. ಪಾವತಿಸಿ ಮಂಜುನಾಥ್ ನಿವೇಶನ ಮಂಜೂರು ಮಾಡಿಸಿಕೊಂಡಿದ್ದಾರೆ. ಮೂಲ ಮಾಲೀಕರ ಹೆಸರು ಕೈಬಿಟ್ಟು ಜಿಪಿಎ ಪ್ರತಿ ನಿಽ ಮಂಜುನಾಥ್ ನೇರವಾಗಿ ತಮ್ಮ ಹೆಸರಿಗೆ ನಿವೇ ಶನ ನೋಂದಣಿ ಮಾಡಿಕೊಂಡಿದ್ದಾರೆ.
ಮೈಸೂರಿನ ವಿಜಯನಗರ ಬಡಾವಣೆಯ ೩ ಮತ್ತು ೪ನೇ ಹಂತದಲ್ಲಿ ಈ ನಿವೇಶನಗಳನ್ನು ಮಂಜೂರು ಮಾಡಲಾಗಿದೆ. ೬೦೪೦ ಚದರ ಅಡಿ ಅಳತೆಯ ನಿವೇಶನಗಳಿಗೆ ಈಗ ಇಲ್ಲಿ ಒಂದೂವರೆಯಿಂದ ೨ ಕೋಟಿ ರೂ. ಮಾರುಕಟ್ಟೆ ದರ ಇದ್ದು, ಇಷ್ಟು ಕಡಿಮೆ ಬೆಲೆಯಲ್ಲಿ ನಿವೇಶನಗಳನ್ನು ಹೇಗೆ ಮಾರಾಟ ಮಾಡಲಾಯಿತು ಎನ್ನುವುದು ದೊಡ್ಡ ಪ್ರಶ್ನೆಯಾಗಿದೆ. ಒಂದು ವರ್ಷದ ಹಿಂದೆಯೇ ಮುಡಾ ಭ್ರಷ್ಟಾಚಾರದ ಬಗ್ಗೆ ಲೋಕಾಯುಕ್ತದಲ್ಲಿ ದೂರು ದಾಖಲಾಗಿತ್ತು. ಮುಡಾ ಆಯುಕ್ತ ಜಿ. ಟಿ. ದಿನೇಶ್ ಕುಮಾರ್, ಉದ್ಯಮಿ ಮಂಜುನಾಥ್ ವಿರುದ್ಧ ಕೃಷ್ಣ ಎಂಬವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಮೈಸೂರು ನಗರಾಭಿವೃದ್ಧಿ ಪ್ರಾಽಕಾರದ ಆಯುಕ್ತ ಜಿ. ಟಿ. ದಿನೇಶ್‌ಕುಮಾರ್, ವಿಶೇಷ ತಹಸಿಲ್ದಾರ್ ಶಿವಕುಮಾರ್, ಹೆಚ್ಚುವರಿ ಜಿಲ್ಲಾ ನೋಂದಣಾಽಕಾರಿ ಕಾವ್ಯ, ರಿಯಲ್ ಎಸ್ಟೇಟ್ ಉದ್ಯಮಿ ಎನ್. ಮಂಜುನಾಥ್ ವಿರುದ್ಧ ದೂರು ದಾಖಲಾಗಿದೆ.
ಮತ್ತೊಂದು ಪ್ರಕರಣದಲ್ಲಿ 7 ನಿವೇಶನ ಸೇಲ್ ಅಗ್ರಿಮೆಂಟ್
ಮೈಸೂರು: ರಾಮಕೃಷ್ಣನಗರದ ಆಂದೋಲನ ಸರ್ಕಲ್ ಬಳಿ ಇರುವ ಮುಡಾ ನಿವೇಶನಗಳನ್ನು ಖಾಸಗಿ ಸಂಘಸಂಸ್ಥೆಗಳಿಗೆ ನೀಡಲಾಗಿತ್ತು. ಆದರೆ ಸಂಘದ ಸದಸ್ಯರಿಗೆ ಕ್ರಯ ಮಾಡುವ ಮುನ್ನವೇ ಕಾರ್ತಿಕ ಬಡಾವಣೆಯ ಬಿಲ್ಡರ್ ಮಂಜುನಾಥ್ ಅವರು ಆ ಸಂಘದ ವಿವಿಧ ಸದಸ್ಯರಿಂದ ಒಟ್ಟು ೭ ನಿವೇಶನಗಳನ್ನು ತಮ್ಮ ಹೆಸರಿಗೆ ಸೇಲ್ ಅಗ್ರಿಮೆಂಟ್ ಮಾಡಿ ಕೊಂಡಿದ್ದರು. ಈಗ ಮಂಜುನಾಥ್ ವಿರುದ್ಧ ಇಡಿ ಅಽಕಾರಿಗಳು ತನಿಖೆ ನಡೆಸುತ್ತಿರುವ ಹೊತ್ತಲ್ಲೇ ಒಂದೊಂದಾಗಿ ಅಕ್ರಮಗಳು ಹೊರ ಬರುತ್ತಿವೆ. ಈಗ ವಿಜಯನಗರ ಬಡಾವಣೆ ಯಲ್ಲಿ ಕೋಟ್ಯಂತರ ರೂ. ಬೆಲೆಯ ನಿವೇಶನ ಗಳನ್ನು ಕಡಿಮೆ ದರಕ್ಕೆ ನೋಂದಣಿ ಮಾಡಿಕೊಟ್ಟಿ ರುವ ದೊಡ್ಡ ಹಗರಣ ಬಯಲಿಗೆ ಬಂದಿದೆ